ಆರ್​ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯ್ತು ಜಿತೇಶ್​ ಶರ್ಮಾ ಐಪಿಎಲ್​ ತಂಡ..ಹನ್ನೊಂದರ ಬಳಗದಲ್ಲಿರೋದು ಯಾರ್ಯಾರು ಗೊತ್ತಾ..? | Jitesh Sharma All Time IPL XI

Jitesh Sharma
Jitesh Sharma
Published on
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್​ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ತಮ್ಮ ಸಾರ್ವಕಾಲಿಕ ಐಪಿಎಲ್ ತಂಡವನ್ನು ಹೆಸರಿಸಿದ್ದು, ಅಚ್ಚರಿ ಎಂಬಂತೆ ಇದರಿಂದ ಬ್ಯಾಟಿಂಗ್​ ದಿಗ್ಗಜ ವಿರಾಟ್ ಕೊಹ್ಲಿಯನ್ನು ಕೈಬಿಟ್ಟಿದ್ದಾರೆ.
ಕಳೆದ ವರ್ಷದ ಐಪಿಎಲ್​ನಲ್ಲಿ ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್​ ರೂಂ ಹಂಚಿಕೊಂಡಿದ್ದ ಜಿತೇಶ್​, ವಿರಾಟ್​ರೊಂದಿಗೆ ಉತ್ತಮ ಒಡನಾಟ ಕೂಡ ಹೊಂದಿದ್ದಾರೆ, ಹೀಗಿದ್ದಾಗಲು ಕಿಂಗ್​ ಕೊಹ್ಲಿಯನ್ನು ಹೊರಗಿಟ್ಟು ಹನ್ನೊಂದರ ಬಳಗವನ್ನು ಸಿದ್ಧಪಡಿಸಿದ್ದು ಅನೇಕರಿಗೆ ಅಚ್ಚರಿ ತಂದರೆ, ಇನ್ನು ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ.
ಕಳೆದ ವರ್ಷದ ಹರಾಜಿನಲ್ಲಿ 11 ಕೋಟಿ ರೂಪಾಯಿಗೆ ಆರ್​ಸಿಬಿ ಬಳಗ ಸೇರಿಕೊಂಡಿದ್ದ ಜಿತೇಶ್​ ಫಿನಿಷರ್ ಪಾತ್ರ ನಿಭಾಯಿಸಿದ್ದರು. ಈ ಋತುವಿನಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 176.35 ರ ಸ್ಟ್ರೈಕ್ ರೇಟ್‌ನೊಂದಿಗೆ 261 ರನ್ ಗಳಿಸಿದರು.

ಧೋನಿಗೆ ನಾಯಕತ್ವ

ಕ್ರಿಕ್‌ಟ್ರಾಕರ್‌ಗೆ ನೀಡಿದ ಸಂದರ್ಶನದಲ್ಲಿ, ಜಿತೇಶ್ ರೋಹಿತ್ ಶರ್ಮಾ ಮತ್ತು ಆಡಮ್ ಗಿಲ್‌ಕ್ರಿಸ್ಟ್​ರನ್ನು ಆರಂಭಿಕ ಆಟಗಾರರನ್ನಾಗಿ ಹೆಸರಿಸಿದ್ದು, ಈ ಜೋಡಿ ಎರಡನೇ ವರ್ಷದ ಐಪಿಎಲ್​ನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಪರ ಆಡಿದ್ದರು. 3 ನೇ ಸ್ಥಾನದಲ್ಲಿ ಭಾರತದ ಪ್ರಸ್ತುತ T20I ನಾಯಕ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ.
ಮಧ್ಯಮ ಕ್ರಮಾಂಕವನ್ನು ದಕ್ಷಿಣ ಆಫ್ರಿಕಾದ ದಿಗ್ಗಜರಾದ ಜಾಕ್ಸ್​ ಕಾಲಿಸ್ ಮತ್ತು ಎಬಿ ಡಿವಿಲಿಯರ್ಸ್, ನಾಯಕ ಎಂಎಸ್ ಧೋನಿ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಕಾಣಿಸಿಕೊಂಡಿದ್ದಾರೆ. ಬೌಲಿಂಗ್ ವಿಭಾಗವನ್ನು ಗಮನಿಸುವುದಾದರೆ ಸ್ಪಿನ್​ ಮಾಂತ್ರಿಕ ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ಮತ್ತು ಜೋಶ್ ಹ್ಯಾಜಲ್‌ವುಡ್ ಕೂಡ ಸ್ಥಾನ ಪಡೆದಿದ್ದಾರೆ.

ಜಿತೇಶ್ ಶರ್ಮಾರ ಸಾರ್ವಕಾಲಿಕ ಐಪಿಎಲ್​ ತಂಡ

ರೋಹಿತ್ ಶರ್ಮಾ, ಆಡಮ್ ಗಿಲ್‌ಕ್ರಿಸ್ಟ್ (WK), ಸೂರ್ಯಕುಮಾರ್ ಯಾದವ್, ಜಾಕ್ವೆಸ್ ಕಾಲಿಸ್, ಎಬಿ ಡಿವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ (ನಾಯಕ), ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಜೋಶ್ ಹ್ಯಾಜಲ್‌ವುಡ್ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net