ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದ ಜೀಪ್; 5 ಮಂದಿ ಸ್ಥಳದಲ್ಲೇ ಸಾವು, ಐವರಿಗೆ ಗಾಯ | Accident

ಜೀಪ್ ಉರುಳಿಬಿದ್ದ ಸ್ಥಳದಲ್ಲಿ ಎಸ್​ಡಿಆರ್​​​ಎಫ್ ರಕ್ಷಣಾ ಕಾರ್ಯ
ಜೀಪ್ ಉರುಳಿಬಿದ್ದ ಸ್ಥಳದಲ್ಲಿ ಎಸ್​ಡಿಆರ್​​​ಎಫ್ ರಕ್ಷಣಾ ಕಾರ್ಯ
Published on
ಡೆಹ್ರಾಡೂನ್: ಉತ್ತರಾಖಂಡದ ಲೋಹಘಾಟ್ ಪ್ರದೇಶದಲ್ಲಿ ಇಂದು(ಡಿ. 05) ಮುಂಜಾನೆ ಮದುವೆಗೆ ಹೊರಟಿದ್ದ ಬೊಲೆರೋ ಜೀಪ್​ವೊಂದು ಆಳವಾದ ಕಂದಕಕ್ಕೆ ಬಿದ್ದು ಅಪಘಾತ(Accident) ಸಂಭವಿಸಿದ್ದು, ಘಟನೆಯಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಬರಾಕೋಟ್ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ ನಡೆದಿದೆ. ಮದುವೆ ವಿಧಿವಿಧಾನಗಳನ್ನು ಮುಗಿಸಿಕೊಂಡು ಗುಂಪೊಂದು ಮಹೀಂದ್ರಾ ಬೊಲೆರೊ ಜೀಪಿನಲ್ಲಿ ವಾಪಸ್ ಆಗುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಎಸ್​ಡಿಆರ್​ಎಫ್ ತಂಡ ಆಗಮಿಸಿ ರಕ್ಷಿಸುವ ಕಾರ್ಯ ನಡೆಸಿವೆ.
ಮೃತರನ್ನು ರುದ್ರಾಪುರದ ಸುಭಾಷನಗರದ ಪ್ರಕಾಶ್ ಚಂದ್ ಉನಿಯಾಲ್(40), ಕೇವಲ್ ಚಂದ್ರ ಉನಿಯಾಲ್(35), ಸುರೇಶ್ ನೌಟಿಯಾಲ್(32), ಭಾವನಾ ಚೌಬೆ(28), ಮತ್ತು ಆಕೆಯ ಆರು ವರ್ಷದ ಮಗ ಪ್ರಿಯಾಂಶು ಚೌಬೆ ಎಂದು ಗುರುತಿಸಲಾಗಿದೆ.
ಗಾಯಗೊಂಡವರು ಚಾಲಕನಾದ ಅಲ್ಮೋರಾದ ಸೆರಾಘಾಟ್‌ನ ದೇವಿದತ್ ಪಾಂಡೆ, ರುದ್ರಾಪುರದ ಧೀರಜ್ ಉನಿಯಾಲ್, ಗಂಗೊಳ್ಳಿಹಾಟ್‌ನ ಬ್ಯಾಂಕೋಟ್‌ನ ರಾಜೇಶ್ ಜೋಶಿ, ದೆಹಲಿಯ ಚೇತನ್ ಚೌಬೆ ಹಾಗೂ ಗಂಗೊಳ್ಳಿಹಾಟ್​​ನ ಸೇರಘಟ್ಟದ ​​ಭಾಸ್ಕರ್ ಪಾಂಡವರು. ಲೋಹಘಾಟ್ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಾತನಾಡಿರುವ ಎಸ್‌ಡಿಆರ್‌ಎಫ್ ಕಮಾಂಡೆಂಟ್ ಅರ್ಪಣ್ ಯದುವಂಶಿ, ಆಳವಾದ ಕಂದಕದಿಂದ ಬಲಿಪಶುಗಳನ್ನು ಹೊರತೆಗೆಯುವುದು ಅತ್ಯಂತ ಸವಾಲಿನ ಕೆಲಸ. ಆದರೆ ನಿರಂತರ ಪ್ರಯತ್ನಗಳ ನಂತರ ಎಲ್ಲರನ್ನೂ ಹೊರತೆಗೆಯಲಾಯಿತು ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net