ಜವಾಹರಲಾಲ್ ನೆಹರು ಅವರ ಬರಹ ಕೇವಲ ಇತಿಹಾಸವಲ್ಲ; ಅವು ವಿಕಸನಗೊಳ್ಳುತ್ತಿರುವ ಭಾರತದ ಆತ್ಮಸಾಕ್ಷಿಯ ದಾಖಲೆ; ರಾಹುಲ್ ಗಾಂಧಿ | Rahul Gandhi

ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published on
ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಬರಹಗಳು ಕೇವಲ ಇತಿಹಾಸವಲ್ಲ, ಅವು ವಿಕಸನಗೊಳ್ಳುತ್ತಿರುವ ಭಾರತದ ಆತ್ಮಸಾಕ್ಷಿಯ ದಾಖಲೆಗಳಾಗಿವೆ ಎಂದು ಶುಕ್ರವಾರ(ನ. 21) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ.
'ಜವಾಹರಲಾಲ್ ನೆಹರು ಅವರ ಆಯ್ದ ಕೃತಿಗಳು' ಡಿಜಿಟಲೀಕರಣ ಪೂರ್ಣಗೊಂಡ ಸಂದರ್ಭದಲ್ಲಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಜವಾಹರಲಾಲ್ ನೆಹರು ಅವರ ಬರಹಗಳು ಕೇವಲ ಇತಿಹಾಸವಲ್ಲ, ಅವು ಭಾರತದ ವಿಕಸನಗೊಳ್ಳುತ್ತಿರುವ ಆತ್ಮಸಾಕ್ಷಿಯ ದಾಖಲೆಯಾಗಿದೆ. ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವದ ಪ್ರಯಾಣವನ್ನು ಅದರ ಧೈರ್ಯ, ಅದರ ಅನುಮಾನಗಳು, ಅದರ ಕನಸುಗಳನ್ನು ಅರ್ಥಮಾಡಿಕೊಳ್ಳಲು ಬಯಸುವ ಯಾರಿಗಾದರೂ ಅವರ ಮಾತುಗಳು ಪ್ರಬಲ ದಿಕ್ಸೂಚಿಯಾಗಿ ಉಳಿದಿವೆ.
ಈ ಪರಂಪರೆ ಈಗ ಮುಕ್ತವಾಗಿದೆ, ಹುಡುಕಬಹುದಾಗಿದೆ ಮತ್ತು ಎಲ್ಲರಿಗೂ ಉಚಿತವಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ. ಇದು ವಿಸ್ತರಿಸುತ್ತಲೇ ಇರುತ್ತದೆ. ಹೊಸ ಆರ್ಕೈವ್‌ಗೆ ಭೇಟಿ ನೀಡಿ ಎಂದು ಆರ್ಕೈವ್‌ಗೆ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.
'ಜವಾಹರಲಾಲ್ ನೆಹರು ಅವರ ಆಯ್ದ ಕೃತಿಗಳನ್ನು 100 ಸಂಪುಟಗಳ ಸಂಪೂರ್ಣ ಸೆಟ್‌ನೊಂದಿಗೆ ಈಗ ಆನ್‌ಲೈನ್‌ನಲ್ಲಿ ಲಭ್ಯವಿರಿಸಲಾಗಿದೆ. ಇದರಲ್ಲಿ ದೇಶದ ಮೊದಲ ಪ್ರಧಾನ ಮಂತ್ರಿಗೆ ಸಂಬಂಧಿಸಿದ ಸುಮಾರು 35,000 ದಾಖಲೆಗಳು ಮತ್ತು ಸುಮಾರು 3,000 ವಿವರಣೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಉಚಿತವಾಗಿ ಎಲ್ಲರೂ ಡೌನ್​ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಜವಾಹರಲಾಲ್ ನೆಹರು ಸ್ಮಾರಕ ನಿಧಿಯ (ಜೆಎನ್‌ಎಂಎಫ್) ಟ್ರಸ್ಟಿಯಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ನೇತೃತ್ವದಲ್ಲಿ ಈ ಕಾರ್ಯ ನಡೆದಿದ್ದು, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅದನ್ನು ಶ್ಲಾಘಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net