ಜನನಾಯಗನ್ ಆಡಿಯೋ ಲಾಂಚ್; ಮಲೇಷಿಯಾದಲ್ಲಿ ದಳಪತಿ ವಿಜಯ್ ಹವಾ; ಕಾರ್ಯಕ್ರಮದಲ್ಲಿ ವಿಜಯ್ ಹೇಳಿದ್ದೇನು? | Thalapathy Vijay

ದಳಪತಿ ವಿಜಯ್
ದಳಪತಿ ವಿಜಯ್
Published on
ಕೌಲಾಲಂಪುರ: ಮಲೇಷಿಯಾದ ಕೌಲಾಲಂಪುರದಲ್ಲಿ ನಿನ್ನೆ (ಡಿ.27) ತಮಿಳಿನ ಸ್ಟಾರ್​ ನಟ, 'ಟಿವಿಕೆ' (ತಮಿಳಗ ವೆಟ್ರಿ ಕಳಗಮ್​​) ಪಕ್ಷದ ನಾಯಕ ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನನಾಯಗನ್'​ ಆಡಿಯೋ ಲಾಂಚ್​ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಬೃಹತ್ ಸಂಖ್ಯೆಯಲ್ಲಿ ಸೇರಿದ್ದರು. ಕಾರ್ಯಕ್ರಮವೂ ಮಲೇಷ್ಯಾದ ಬುಕ್​ ಆಪ್​ ರೇಕಾರ್ಡ್​ನಲ್ಲಿ ಸ್ಥಾನ ಪಡೆದಿದೆ. 
ತಮಿಳು ಚಿತ್ರರಂಗಕ್ಕೆ ಹಲವು ಸೂಪರ್​ಹಿಟ್​ ಸಿನಿಮಾಗಳ ಕೊಡುಗೆ ನೀಡಿರುವ ದಳಪತಿ ವಿಜಯ್ ಅವರ ಕೊನೆಯ ಚಿತ್ರ ಇದು ಎಂಬ ಬೇಸರದ ನಡುವೆಯೂ ಕೌಲಾಲಂಪುರ ಬುಕಿತ್ ಜೈಲ್​ ಸ್ಟೇಡಿಯಂನಲ್ಲಿ ದಳಪತಿ ತಿರುವಿಳ ಎಂಬ ಹೆಸರಿನಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ವಿಜಯ್ ಅವರ ಅಪಾರ ಅಭಿಮಾನಿಗಳ ದಂಡೇ ಹರಿದು ಬಂದಿದೆ. ಅಂದಾಜು ಕಾರ್ಯಕ್ರಮದಲ್ಲಿ ಸುಮಾರು 90 ಸಾವಿರ ಅಭಿಮಾನಿಗಳು ಸೇರಿದ್ದರು ಎನ್ನಲಾಗಿದೆ. 
ಅದ್ಧೂರಿಯಾಗಿ ನಡೆದ ಆಡಿಯೋ ಲಾಂಚ್​ ಈವೆಂಟ್​ನಲ್ಲಿ ಜನನಾಯಗನ್ ಟೀಮ್​ ನಟಿ ಪೂಜಾ ಹೆಗ್ಡೆ, ಪ್ರಿಯಾಮಣಿ, ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​, ಸಾಹಿತಿ ವಿವೇಕ್​, ಕೋರಿಯೋಗ್ರಫರ್​ಗಳಾದ ಶೋಭಿ, ಶೇಖರ್​ ಜೊತೆಗೆ ವಿಜಯ್ ತಂದೆ-ತಾಯಿ, ಕಾಲಿವುಡ್​ ನಿರ್ದೇಶಕರ ತಂಡ(ಆಟ್ಲಿ, ಲೋಕೇಶ್ ಕನಕರಾಜು ಸೇರಿ), ಸಂಗೀತಗಾರರು, ಅನೇಕ ಸೆಲೆಬ್ರೆಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತುಂಬಿ ತುಳುಕುತ್ತಿದ್ದ ಸ್ಟೇಡಿಯಂ ವಿಜಯ್​ ಆಗಮಿಸುತ್ತಿದ್ದಂತೆ ಅಭಿಮಾನಿಗಳತ್ತ ಕೈಬಿಸಿ, ಧನ್ಯವಾದ ಅರ್ಪಿಸಿದ್ದು ವಿಶೇಷ. ಜೊತೆಗೆ ಕೆಲವು ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿ ಕೊನೆಯದಾಗಿ ರಂಜಿಸಿದ್ದಾರೆ. ಇದೊಂದು ಸಿನಿಮಾಗೆ ಸಿದ್ಧಪಡಿಸಿರುವ ವೇದಿಕೆಯೇ ಹೊರತು ರಾಜಕೀಯ ಕಾರ್ಯಕ್ರಮಕ್ಕಲ್ಲ ಎಂಬುದನ್ನು ಅಲ್ಲಲ್ಲಿ ಟಿವಿಕೆ ಎಂದು ಕೂಗುತ್ತಿದ್ದ ಅಭಿಮಾನಿಗಳಿಗೆ ಪರೋಕ್ಷವಾಗಿ ತಿಳಿಸಿದರು. 

ದಳಪತಿ ವಿಜಯ್ ಹೇಳಿದ್ದೇನು? 

ತಮ್ಮ ಕೊನೆಯ ಸಿನಿಮಾದ ಆಡಿಯೋ ಲಾಂಚ್​ನಲ್ಲಿ ಮಾತನಾಡಿದ ವಿಜಯ್, ಮರಳಿನಿಂದ ಸಣ್ಣ ಮನೆ ಕಟ್ಟಲು ಚಿತ್ರರಂಗಕ್ಕೆ ಬಂದೆ. ಆದರೆ ಇಂದು (ನೀವು)ಅಭಿಮಾನಿಗಳು ನನಗೆ ಅರಮನೆ ನೀಡಿದ್ದೀರಿ. ಅನೇಕ ಮಂದಿ ನಮ್ಮ ಚಿತ್ರಗಳನ್ನು ನೋಡಲು ಥಿಯೇಟರ್​ಗೆ ಹೋಗುತ್ತಿದ್ದರು.  ಎಂದು ಹೇಳಿದರು. ಆದರೆ, ಅವರ ಅಭಿಮಾನಿಗಳು ತಮಗೆ ಅರಮನೆ ನೀಡಿದ್ದಾರೆ ಎಂದು ಹೇಳಿದರು. ಅನೇಕ ಜನರು ತಮ್ಮ ಚಿತ್ರಗಳನ್ನು ನೋಡಲು ಚಿತ್ರಮಂದಿರಗಳಿಗೆ ಹೋಗುತ್ತಿದ್ದರು. ಇಲ್ಲಿಯವರೆಗೂ ಬೆಂಬಲಿಸಿದ ಎಲ್ಲರ ಜೊತೆ ಇನ್ನೂ 30 ವರ್ಷಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದರು.
ಜನರ ಸೇವೆಗಾಗಿ ಸಿನಿಮಾಗಳನ್ನು ತ್ಯಜಿಸುತ್ತಿರುವುದಾಗಿ ಹೇಳಿರುವ ಅವರು, ಇಂದಿನಿಂದ ತಮ್ಮ ಸಮಯವನ್ನು ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಮೀಸಲಿಡುತ್ತೇನೆ. ಚಲನಚಿತ್ರ ವೃತ್ತಿಜೀವನದಿಂದ ಸಂಪೂರ್ಣವಾಗಿ ನಿವೃತ್ತಿ ಹೊಂದುತ್ತಿದ್ದೇನೆ. ಜನನಾಯಗನ್ ಚಿತ್ರವೇ ತಮ್ಮ ವೃತ್ತಿ ಜೀವನದ ಕೊನೆಯ ಚಿತ್ರ ಎಂದು ಘೋಷಿಸಿದರು. 

ಈ ಸಂದರ್ಭದಲ್ಲಿ, ವಿಜಯ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳುವಾಗ ಭಾವುಕರಾದರು, ವಿಜಯ್ ಅವರ ಭಾಷಣವನ್ನು ಕೇಳಿ ಅಭಿಮಾನಿಗಳು ಕೂಡ ಕಣ್ಣೀರು ಬೇಸರವನ್ನು ವ್ಯಕ್ತಪಡಿಸಿದರು. ಈ ವೇಳೆ ಈ ಸ್ಟೇಡಿಯಂ ದಳಪತಿ ಎಂದು ಒಂದೇ ರೀತಿಯಲ್ಲಿ ಹರ್ಷೋದ್ಘಾರವನ್ನು ಮೊಳಗಿಸಿದೆ. 
ಜ. 15ರಂದು ಜನನಾಯಗನ್ ಸಿನಿಮಾ ಬಿಡುಗಡೆ ಆಗುತ್ತಿದೆ. ಕಳೆದ ವರ್ಷ ಫೆ. 2ರಂದು ಟಿವಿಕೆ ಪಕ್ಷವನ್ನು ಸ್ಥಾಪಿಸಿರುವ ವಿಜಯ್ ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಭಾರಿ ಸಿದ್ದತೆ ನಡೆಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net