ಸಿನಿಮಾ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಶ್ರಮವಲ್ಲ. ಇದರ ಹಿಂದೆ ಲೇಖಕರು, ತಾಂತ್ರಿಕ ತಜ್ಞರು, ಕಲಾವಿದರು, ಪ್ರದರ್ಶಕರು ಮತ್ತು ಸಣ್ಣ ಉದ್ಯಮಿಗಳ ದೊಡ್ಡ ಸಮೂಹವೇ ಇದೆ. ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಅಥವಾ ಸ್ಪಷ್ಟತೆ ಇಲ್ಲದಿದ್ದರೆ, ಈ ಇಡೀ ವ್ಯವಸ್ಥೆಯ ಆರ್ಥಿಕ ಸ್ಥಿತಿಯ ಮೇಲೆ ಹೊಡೆತ ಬೀಳುತ್ತದೆ. ಸಕಾಲದಲ್ಲಿ ಚಲನಚಿತ್ರ ಬಿಡುಗಡೆಯಾಗುವುದು ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಅತ್ಯಗತ್ಯ ಎಂದು ಅವರು ನೆನಪಿಸಿದ್ದಾರೆ.