ಪತಿ ವಿಡಿಯೋ ಕಾಲ್​ನಲ್ಲಿದ್ದಾಗಲೇ ಪತ್ನಿ ಆತ್ಮಹತ್ಯೆ; ಅಪ್ಪನ ಕ್ರೂರತೆ ಬಗ್ಗೆ ಸಾಕ್ಷಿ ಬಿಚ್ಚಿಟ್ಟ ಮಕ್ಕಳು..Jaipur Woman

​Jaipur Domestic Abuse Case
​Jaipur Domestic Abuse Case
Published on

ಪ್ರಮುಖ ಮುಖ್ಯಾಂಶಗಳು

  • ಜೈಪುರದಲ್ಲಿ ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಮೀನಾ ಆತ್ಮಹತ್ಯೆ.
  • ತಂದೆ ಅಮ್ಮನಿಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಮಾಹಿತಿ ಹಂಚಿಕೊಂಡ ಮಕ್ಕಳು.
  • ಪತಿ ವಿಡಿಯೋ ಕಾಲ್​ನಲ್ಲಿದ್ದಾಗಲೇ ನೇಣು ಬಿಗಿದುಕೊಂಡು ಪತ್ನಿ ಸಾವು, ಮೊಬೈಲ್​ನಲ್ಲಿ ಕಿರುಕುಳದ ಬಗ್ಗೆ ಸಾಕ್ಷಿ ಪತ್ನಿ.
​Jaipur Domestic Abuse Case: ಕೌಂಟುಂಬಿಕ ದೌರ್ಜನ್ಯದಿಂದ ಬೇಸತ್ತು ಇಬ್ಬರು ಮಕ್ಕಳ ತಾಯಿಯೊಬ್ಬರು ರಾಜಸ್ಥಾನದ ಜೈಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ತಂದೆ. ತಾಯಿಗೆ ಎಷ್ಟೆಲ್ಲ ಕಿರುಕುಳ ನೀಡುತ್ತಿದ್ದ ಎಂಬ ಬಗ್ಗೆ ಅಪ್ರಾಪ್ತ ಮಕ್ಕಳು ನೀಡಿರುವ ಹೇಳಿಕೆಗಳು ಮನಕಲಕುವಂತೆ ಮಾಡುತ್ತದೆ.
2015ರಲ್ಲಿ ಅನು ಮೀನಾ ಅವರು ಸಾರ್ವಜನಿಕ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಕೆಲಸ ಮಾಡುತ್ತಿದ್ದ ಗೌತಮ್​ ಮೀನಾ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಸುಖ ದಾಂಪತ್ಯದಲ್ಲಿ ಕಳೆಯುವ ಕನಸು ಕಂಡಿದ್ದ ಅನು, ಹೆಚ್ಚಾಗಿ ಅನುಭವಿಸಿದ್ದು ಕಿರುಕುಳವನ್ನು. ಇದಕ್ಕೆ ಸಾಕ್ಷಿ ಸಿಕ್ಕಿದ್ದು ಅವರ ಮಕ್ಕಳಿಂದ, ತಂದೆ ನಿತ್ಯ ಮದ್ಯ ಸೇವಿಸಿ ಬಂದು ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಹೇಳಿದ್ದಾರೆ.

ತಂದೆಯ ಕ್ರೂರತೆ ಬಿಚ್ಚಿಟ್ಟ ಮಗ

ಅಪ್ಪ ಯಾವಾಗಲೂ ಅಮ್ಮನನ್ನು ಒಡೆಯುತ್ತಿದ್ದ. ಒಂದು ದಿನ ಮನೆಗೆ ಬಂದು ಜೋರಾಗಿ ಹಾಡನ್ನು ಹಾಕಿ, ಟಿವಿ ಹೊಡೆದು ಹಾಕಿದರು. ಅದಾದನಂತರ ಅಮ್ಮನನ್ನು ಹಿಡಿದು ಮನಬಂದಂತೆ ಥಳಿಸಿದರು. ಈ ಸಮಯದಲ್ಲಿ ಅಮ್ಮನಿಗೆ ರಕ್ತದೊತ್ತಡ ಉಂಟಾಗಿ, ಉಪ್ಪಿನ ನೀರು ಕೇಳುತ್ತಿದ್ದಳು. ನಾನು ನೀರು ತರಲು ಹೋದರೆ, ನನ್ನನ್ನು ಅಪ್ಪ ತಡೆಯುತ್ತಿದ್ದ. ಅಮ್ಮನನ್ನು ಬೈದು ಹಿಂಸೆ ಕೊಡುತ್ತಿದ್ದ ಎಂದು ಹತ್ತು ವರ್ಷದ ಮಗ ಹೇಳಿಕೊಂಡಿದ್ದಾನೆ.
ಇನ್ನು ಅನು ಅವರ 8 ವರ್ಷದ ಪುತ್ರಿ ಸಮಾಯ್ರಾ ಕೂಡ ತಂದೆ ಅವರ ತಾಯಿಗೆ ಮನಬಂದಂತೆ ಥಳಿಸುತ್ತಿದ್ದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಒಟ್ಟಾಗಿ ಯಾವುದಾದರೂ ಕಾರ್ಯಕ್ರಮಕ್ಕೆ ತೆರಳಿದ್ದಾಗ, ಪ್ರವಾಸಕ್ಕೆ ತೆರಳಿದ್ದಾಗಲೂ ಎಲ್ಲರ ಮುಂದೆ ಅಮ್ಮನೊಂದಿಗೆ ಜಗಳವಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾಳೆ..
ನಿರಂತರ ದೌರ್ಜನ್ಯ ಮತ್ತು ಕಿರುಕುಳಕ್ಕೆ ಬೇಸತ್ತ ಅನು ಮೀನಾ ಅವರು ಏಪ್ರಿಲ್​.7ರಂದು ಪತಿಗೆ ವಿಡಿಯೋ ಕಾಲ್​ ಮಾಡಿ, ಅವರ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಅನು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಾದರೂ, ಬದುಕುಳಿಯಲಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದರು.

ಮೊಬೈಲ್​ನಲ್ಲಿ ರೆಕಾರ್ಡ್

ಅನು ಮೀನಾ ಅವರ ಮೇಲಿನ ದೌರ್ಜನ್ಯದ ಬಗ್ಗೆ ಮೊಬೈಲ್​ನಲ್ಲಿದ್ದ ಸಾಕ್ಷಿಯನ್ನು ಮಗ ಮಾಹಿರ್ ಪೊಲೀಸರಿಗೆ ನೀಡಿದ್ದಾರೆ. ಕಾರಿನೊಳಗೆ ಗೌತಮ್, ಅನು ಮತ್ತು ಆಕೆಯ ಕುಟುಂಬದವರನ್ನು ಅತ್ಯಂತ ಅಸಭ್ಯ ಪದಗಳಿಂದ ನಿಂದಿಸುತ್ತಿರುವ ದೃಶ್ಯಗಳು ರೆಕಾರ್ಡ್ ಆಗಿವೆ.
ನಾವು ಅನುಗೆ ಅವನ ಜೊತೆ ಇರೋದು ಬೇಡ ವಾಪಸ್ ಬಾ ಎಂದು ಹೇಳಿದ್ದೆವು. ಪ್ರತಿ ಬಾರಿ ಗಲಾಟೆ ನಡೆದಾಗ ನಾವದನ್ನು ಪ್ರಶ್ನಿಸಿದರೆ ಗೌತಮ್ ಕ್ಷಮೆಯಾಚಿಸುತ್ತಿದ್ದ. ಮತ್ತದೇ ತಪ್ಪನ್ನು ಮಾಡುತ್ತಿದ್ದ. ಅನು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಗೌತಮ್​ಗೆ ಯಾವುದೇ ಪಶ್ಚಾತಾಪವಿಲ್ಲ. ಕೆಲವು ದಿನ ಜೈಲಿಗೆ ಹೋಗಿ ಬಂದರೆ ಏನಾಗೋದಿಲ್ಲ ಎಂದು ಹೇಳುತ್ತಿದ್ದಾನೆ ಎಂದು ಅನು ಮೀನಾ ಅವರ ಸಹೋದರ ನೀರಜ್ ಮೀನಾ ಅವರು ಹೇಳಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net