20 ರೂಪಾಯಿ ಕಚೋರಿ ಸವಿಯಲು ಸ್ಕೂಟರ್​ ನಿಲ್ಲಿಸಿದ ಉದ್ಯಮಿಗೆ 20 ಲಕ್ಷ ನಷ್ಟ: ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ! Kachori Break

20 ರೂಪಾಯಿ ಕಚೋರಿ ಸವಿಯಲು ಸ್ಕೂಟರ್​ ನಿಲ್ಲಿಸಿದ ಉದ್ಯಮಿಗೆ 20 ಲಕ್ಷ ನಷ್ಟ: ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ! Kachori Break
Published on: 

ಜೈಪುರ: ಕೇವಲ 20 ರೂಪಾಯಿಯ ಕಚೋರಿ ( Kachori Break ) ಸವಿಯಲು ಹೋದ ಉದ್ಯಮಿಯೊಬ್ಬರು 20 ಲಕ್ಷ ರೂ. ಕಳೆದುಕೊಂಡ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಹಸಿವು ತಣಿಸಿಕೊಳ್ಳಲು ಸ್ಕೂಟಿ ನಿಲ್ಲಿಸಿ ಕಚೋರಿ ತಿನ್ನುತ್ತಿದ್ದ ಕ್ಷಣಾರ್ಧದಲ್ಲೇ, ಖದೀಮರಿಬ್ಬರು ಉದ್ಯಮಿ ಬಳಿ ಬರೋಬ್ಬರಿ 20 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್‌ ಅನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ.

ಈ ಘಟನೆ ಜೈಪುರದ ನಹರ್‌ಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಹಣ ಕಳೆದುಕೊಂಡು ಉದ್ಯಮಿಯನ್ನು ಚಂಪಾಲಾಲ್ ಎಂದು ಗುರುತಿಸಲಾಗಿದೆ. ಸಂಜೆ 4 ಗಂಟೆಯ ಸುಮಾರಿಗೆ ಚಂಪಾಲಾಲ್ ಅವರು ತಮ್ಮ ಸ್ಕೂಟಿಯ ಮುಂಭಾಗದಲ್ಲಿ 20 ಲಕ್ಷ ರೂಪಾಯಿ ನಗದು ತುಂಬಿದ್ದ ಬ್ಯಾಗ್‌ ಅನ್ನು ಇಟ್ಟು, ಕಚೋರಿ ತಿನ್ನಲು ನಿಂತಿದ್ದರು. ಇದೇ ಸಮಯಕ್ಕೆ ಹೊಂಚು ಹಾಕಿ ಬಂದ ಇಬ್ಬರು ಹೆಲ್ಮೆಟ್ ಧರಿಸಿದ್ದ ಸವಾರರು, ಸ್ಕೂಟಿಯಲ್ಲಿದ್ದ ಬ್ಯಾಗ್‌ ಅನ್ನು ಎಗರಿಸಿಕೊಂಡು ಕ್ಷಣಾರ್ಧದಲ್ಲಿ ಕಾಲ್ಕಿತ್ತಿದ್ದಾರೆ.

Also Read
ಅಂದು ಹೊಟ್ಟೆ ತೋರಿಸಿದ್ದಕ್ಕೆ ಕೇಸ್ ಹಾಕಿದ್ದ ನಜ್ರಿಯಾಗೆ ಇಂದು ಏನಾಯ್ತು? ನನ್ನ ದೇವತೆ ಪ್ರತಿಮೆ ಬಿದ್ದೋಯ್ತು ಅಂದ್ರು ನೆಟ್ಟಿಗರು! Nazriya Nazim
20 ರೂಪಾಯಿ ಕಚೋರಿ ಸವಿಯಲು ಸ್ಕೂಟರ್​ ನಿಲ್ಲಿಸಿದ ಉದ್ಯಮಿಗೆ 20 ಲಕ್ಷ ನಷ್ಟ: ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ! Kachori Break

ಹಣದ ಬ್ಯಾಗ್ ಕಳವಾಗಿದ್ದನ್ನು ಕಂಡು ಆಘಾತಕ್ಕೊಳಗಾದ ಚಂಪಾಲಾಲ್, ಕೈಯಲ್ಲಿ ಕಚೋರಿಯನ್ನು ಹಿಡಿದುಕೊಂಡೇ ಕಳ್ಳರ ಬೆನ್ನಟ್ಟಿ ಓಡಿದ್ದಾರೆ. ಅವರ ಆರ್ತನಾದ ಕೇಳಿ ಸ್ಥಳೀಯರು ಕೂಡ ಕಳ್ಳರನ್ನು ಹಿಡಿಯಲು ಬೆನ್ನಟ್ಟಿದರಾದರೂ, ವೇಗವಾಗಿ ಸ್ಕೂಟಿ ಚಲಾಯಿಸಿಕೊಂಡು ಹೋದ ಖದೀಮರು ಜನನಿಬಿಡ ರಸ್ತೆಯಲ್ಲಿ ತಲೆಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಪೂರ್ಣ ಕಳವು ಪ್ರಕರಣದ ದೃಶ್ಯಗಳು ಸಮೀಪದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿವೆ. ಉದ್ಯಮಿಯೊಬ್ಬರು ಆತಂಕದಿಂದ ಕೈಯಲ್ಲಿ ತಿಂಡಿ ಹಿಡಿದುಕೊಂಡೇ ಕಳ್ಳರ ಹಿಂದೆ ಓಡುತ್ತಿರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆಯುತ್ತಿದ್ದು, 'ಇದು ಜಗತ್ತಿನ ಅತ್ಯಂತ ದುಬಾರಿ ಕಚೋರಿ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಂತ್ರಸ್ತ ಉದ್ಯಮಿ ಚಂಪಾಲಾಲ್ ನೀಡಿದ ದೂರಿನ ಆಧಾರದ ಮೇಲೆ ನಹರ್‌ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದು, ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಪರಾರಿಯಾದ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net