ಮಹಿಳಾ ಸುರಕ್ಷತೆಗಾಗಿ ಜಾರಿಗೆ ತಂದಿರುವ ಮಿಷನ್ ಶಕ್ತಿ, ಮಹಿಳಾ ಬೀಟ್ ಪೊಲೀಸ್ ವ್ಯವಸ್ಥೆ ಹಾಗೂ 1090, 181 ಸಹಾಯವಾಣಿಗಳನ್ನು ಬಲಪಡಿಸಲಾಗಿದೆ. 2017 ರಲ್ಲಿ ಕೇವಲ 10,000 ಇದ್ದ ಮಹಿಳಾ ಪೊಲೀಸ್ ಸಿಬ್ಬಂದಿಯ ಸಂಖ್ಯೆ ಪ್ರಸ್ತುತ 44,000 ಕ್ಕೆ ಏರಿಕೆಯಾಗಿದ್ದು, ಹೊಸ ನೇಮಕಾತಿಯೊಂದಿಗೆ 50,000 ದಾಟಲಿದೆ. ಇದಲ್ಲದೆ, ವೀರಾಂಗನೆ ಅವಂತಿ ಬಾಯಿ ಲೋಧಿ, ಉದಾ ದೇವಿ ಪಾಸಿ ಮತ್ತು ಝಲ್ಕಾರಿ ಬಾಯಿ ಕೋರಿ ಅವರ ಹೆಸರಿನಲ್ಲಿ ಮೂರು ಮಹಿಳಾ ಪಿಎಸಿ ಬೆಟಾಲಿಯನ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು