ಅಂದಹಾಗೆ, ರೇಬೀಸ್ (Rabies) ಎಂಬುದು ಸೋಂಕಿತ ಪ್ರಾಣಿಗಳ, ಪ್ರಮುಖವಾಗಿ ನಾಯಿಗಳ ಲಾಲಾರಸದ ಮೂಲಕ ಹರಡುವ ಒಂದು ಅಪಾಯಕಾರಿ ವೈರಲ್ ಕಾಯಿಲೆಯಾಗಿದೆ. ಪ್ರಾಣಿ ಕಚ್ಚಿದಾಗ ಅಥವಾ ಪರಚಿದಾಗ ಮನುಷ್ಯರ ನರಮಂಡಲದ ಮೇಲೆ ರೇಬೀಸ್ ವೈರಸ್ ನೇರ ದಾಳಿ ಮಾಡುತ್ತದೆ. ಆರಂಭದಲ್ಲಿ ಜ್ವರ ಮತ್ತು ತಲೆನೋವಿನಂತಹ ಸಾಮಾನ್ಯ ಲಕ್ಷಣಗಳು ಕಂಡುಬಂದರೂ, ರೋಗ ಉಲ್ಬಣಗೊಂಡಂತೆ ನೀರನ್ನು ಕಂಡು ಹೆದರುವುದು, ಗೊಂದಲ ಮತ್ತು ಪಾರ್ಶ್ವವಾಯು ಉಂಟಾಗಬಹುದು. ರೇಬೀಸ್ ಒಮ್ಮೆ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದರೆ ಅದು ಬಹುತೇಕ ಮಾರಣಾಂತಿಕವಾಗಿರುತ್ತದೆ. ಆದ್ದರಿಂದ, ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಸೋಪಿನಿಂದ ಚೆನ್ನಾಗಿ ತೊಳೆದು, ವಿಳಂಬ ಮಾಡದೆ ವೈದ್ಯರ ಬಳಿ ಲಸಿಕೆ (Anti-Rabies Vaccine) ಹಾಕಿಸಿಕೊಳ್ಳುವುದು ಜೀವ ಉಳಿಸಲು ಇರುವ ಏಕೈಕ ಮಾರ್ಗವಾಗಿದೆ, (ಏಜೆನ್ಸೀಸ್).