ಇದೇ ಮಾದರಿಯ ಸಾರ್ವಜನಿಕ ಸುರಕ್ಷತಾ ಕಾನೂನುಗಳು ಈಗಾಗಲೇ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಲ್ಲಿ ಜಾರಿಯಲ್ಲಿವೆ. ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹಿಂದಿನ ಆಡಳಿತಗಾರರು ಹಿಂಸಾಚಾರದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದರು, ಅದಕ್ಕೆ ನಾವು ಈಗ ಅಂತ್ಯ ಹಾಡುತ್ತಿದ್ದೇವೆ ಎಂದು ಸಿಎಂ ಸುವೇಂದು ಸ್ಪಷ್ಟಪಡಿಸಿದ್ದಾರೆ.