ಪಕ್ಷವು ಸದ್ಯ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿದೆ ಎಂದು ಅಭಿಪ್ರಾಯಪಟ್ಟಿರುವ ವಿಪಕ್ಷ ನಾಯಕ ರಿತಬ್ರತ ಬ್ಯಾನರ್ಜಿ, ನಿಯಮಗಳ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯನ್ನು ಪುನರ್ರಚಿಸಬೇಕು. ಆದರೆ, 2022ರ ಫೆಬ್ರವರಿಯಲ್ಲಿ ರಚನೆಯಾಗಿದ್ದ ಹಳೆಯ ಸಮಿತಿಯ ಅವಧಿ ಈ ವರ್ಷದ ಫೆಬ್ರವರಿ 11ಕ್ಕೇ ಕೊನೆಗೊಂಡಿದೆ. ಆ ಬಳಿಕ ಯಾವುದೇ ಹೊಸ ಸಮಿತಿ ರಚನೆಯಾಗದ ಕಾರಣ, ತಾವೇ ಹೊಸ ಸಾಂಸ್ಥಿಕ ರಚನೆಯನ್ನು ಮಾಡುವುದು ಅನಿವಾರ್ಯವಾಯಿತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.