_1787595737945.webp?w=480&auto=format%2Ccompress&fit=max)
_1787595737945.webp?w=480&auto=format%2Ccompress&fit=max)
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತನ್ನ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆಗೆ ಸಜ್ಜಾಗುತ್ತಿದ್ದು, ರಾಕೆಟ್ಗಳು ಹಾಗೂ ದಿನನಿತ್ಯದ ಸಾಮಾನ್ಯ ಉಪಗ್ರಹಗಳ ಉತ್ಪಾದನೆಯಿಂದ ಹಂತ ಹಂತವಾಗಿ ಹಿಂದೆ ಸರಿಯಲಿದೆ. ಇನ್ನು ಮುಂದೆ ಸಂಸ್ಥೆಯು ಮುಂದುವರಿದ ತಂತ್ರಜ್ಞಾನ, ನೂತನ ಆವಿಷ್ಕಾರಗಳು ಹಾಗೂ ಉನ್ನತ ಮಟ್ಟದ ವೈಜ್ಞಾನಿಕ ಸಂಶೋಧನಾ ಯೋಜನೆಗಳ ಮೇಲಷ್ಟೇ ಸಂಪೂರ್ಣ ಗಮನ ಕೇಂದ್ರೀಕರಿಸಲಿದೆ ಎಂದು ವರದಿಗಳು ತಿಳಿಸಿವೆ.
‘ಇಂಡಿಯಾಃ100 ಎಕಾನಮಿ ಸಮ್ಮಿಟ್’ನಲ್ಲಿ ಮಾತನಾಡಿದ ಇನ್-ಸ್ಪೇಸ್ ಅಧ್ಯಕ್ಷ ಡಾ. ಪವನ್ ಗೋಯೆಂಕಾ, ಉಡಾವಣಾ ವಾಹನಗಳ (ರಾಕೆಟ್) ಉತ್ಪಾದನೆಯಿಂದ ಇಸ್ರೋ ಸಂಪೂರ್ಣವಾಗಿ ಹೊರಬರಲಿದ್ದು, ಈ ಜವಾಬ್ದಾರಿಯನ್ನು ಖಾಸಗಿ ಹಾಗೂ ಸಾರ್ವಜನಿಕ ವಲಯದ ಕಂಪನಿಗಳು ವಹಿಸಿಕೊಳ್ಳಲಿವೆ ಎಂದು ತಿಳಿಸಿದ್ದಾರೆ. ಈ ಮಹತ್ವದ ಹೆಜ್ಜೆಯು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಪ್ರಮುಖ ವೈಜ್ಞಾನಿಕ ಸಂಶೋಧನೆಗಳ ಪವರ್ಹೌಸ್ ಆಗಿ ಪರಿವರ್ತಿಸಲಿದ್ದು, ಭಾರತದ ಖಾಸಗಿ ಬಾಹ್ಯಾಕಾಶ ಪರಿಸರ ವ್ಯವಸ್ಥೆ ಬೃಹತ್ ಮಟ್ಟದಲ್ಲಿ ಬೆಳೆಯಲು ಸಹಕಾರಿ ಆಗಲಿದೆ ಎಂದು ಹೇಳಲಾಗುತ್ತಿದೆ.
ಖಾಸಗಿ ವಲಯಕ್ಕೆ ತಂತ್ರಜ್ಞಾನ ಹಸ್ತಾಂತರ: ಈ ಬದಲಾವಣೆ ಈಗಾಗಲೇ ಆರಂಭವಾಗಿದ್ದು, ಸಣ್ಣ ಉಪಗ್ರಹ ಉಡಾವಣಾ ವಾಹಕ (ಎಸ್ಎಸ್ಎಲ್ವಿ) ತಂತ್ರಜ್ಞಾನ ಮತ್ತು ಉತ್ಪಾದನಾ ಹಕ್ಕನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್)ಗೆ ವಹಿಸಲಾಗಿದೆ. ಮುಂದಿನ ಹಂತದಲ್ಲಿ ಪ್ರಮುಖ ರಾಕೆಟ್ಗಳಾದ ಪಿಎಸ್ಎಲ್ವಿ ಹಾಗೂ ಚಂದ್ರಯಾನ-3 ಯಶಸ್ಸಿಗೆ ಕಾರಣವಾದ ಎಲ್ವಿಎಂ3 ರಾಕೆಟ್ಗಳ ನಿಮಾಣವನ್ನು ಸಂಪೂರ್ಣವಾಗಿ ಖಾಸಗಿ ಕಂಪನಿಗಳಿಗೇ ಹಸ್ತಾಂತರಿಸಲಾಗುತ್ತದೆ. ಇಸ್ರೋ ಈಗಾಗಲೇ 120ಕ್ಕೂ ಹೆಚ್ಚು ತಂತ್ರಜ್ಞಾನಗಳನ್ನು ಉದ್ಯಮ ರಂಗಕ್ಕೆ ವರ್ಗಾಯಿಸಿದೆ.
ಭಾರತದ ಬಾಹ್ಯಾಕಾಶ ಆರ್ಥಿಕತೆಯನ್ನು ಪ್ರಸ್ತುತ ಇರುವ 76 ಸಾವಿರ ಕೋಟಿ ರೂ.ನಿಂದ 2033ರ ವೇಳೆಗೆ 4.21 ಲಕ್ಷ ಕೋಟಿ ರೂ. ಗೆ ಏರಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳೇ ಉಪಗ್ರಹಗಳನ್ನು ನಿರ್ವಿುಸಿ, ಅವುಗಳ ಒಡೆತನ ಹೊಂದಿ, ಡೇಟಾ ಮತ್ತು ಸೇವೆಗಳನ್ನು ಮಾರಾಟ ಮಾಡಲು ಮುಕ್ತ ಅವಕಾಶ ನೀಡಲಾಗುತ್ತಿದೆ. ರಕ್ಷಣಾ ಇಲಾಖೆಯು 31 ಉಪಗ್ರಹಗಳಿಗಾಗಿ ಈಗಾಗಲೇ ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಬಲವನ್ನು ಕುಂದಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಸರ್ಕಾರವು ಆಕ್ರಮಣಕಾರಿ ಖಾಸಗೀಕರಣ ನೀತಿಯನ್ನು ಅನುಸರಿಸುತ್ತಿರುವುದನ್ನು ಪಕ್ಷ ತೀವ್ರವಾಗಿ ಖಂಡಿಸಿದೆ. ಕಳೆದ 6 ದಶಕಗಳಲ್ಲಿ ವಿಕ್ರಮ್ ಸಾರಾಭಾಯ್, ಸತೀಶ್ ಧವನ್, ಬ್ರಹ್ಮಪ್ರಕಾಶ್, ಯು.ಆರ್. ರಾವ್ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಹಲವು ಶ್ರೇಷ್ಠ ವಿಜ್ಞಾನಿಗಳ ದೂರದೃಷ್ಟಿ, ನಾಯಕತ್ವ ಹಾಗೂ ಸಮರ್ಪಣಾ ಭಾವದಿಂದ ಇಸ್ರೋ ಹೆಮ್ಮರವಾಗಿ ಬೆಳೆದಿದೆ. ಈ ಸಂಸ್ಥೆಯ ಸಾಧನೆಗಳನ್ನು ಮತ್ತು ಮೈಲಿಗಲ್ಲುಗಳನ್ನು ಸರ್ಕಾರ ಅಳಿಸಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಟೀಕಿಸಿದ್ದಾರೆ. ಪರಮಾಣು ಶಕ್ತಿ ವಲಯದ ಬಳಿಕ ಬಾಹ್ಯಾಕಾಶ ಕ್ಷೇತ್ರದಲ್ಲೂ ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿದೆ. ಉಪಗ್ರಹ ಸಂಬಂಧಿತ ಬಹುಪಾಲು ಸ್ವತ್ತುಗಳನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಸುಮಾರು 1,000 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗುತ್ತಿರುವ 2ನೇ ಬಾಹ್ಯಾಕಾಶ ನೆಲೆಯನ್ನು ಖಾಸಗಿ ಕಂಪನಿಗೆ ವಹಿಸಲು ಸರ್ಕಾರ ಸಜ್ಜಾಗಿದೆ. ಬಾಹ್ಯಾಕಾಶ ನವೋದ್ಯಮಗಳಿಗೆ ಪೋ›ತ್ಸಾಹ ನೀಡುವುದು ಸ್ವಾಗತಾರ್ಹ. ಆದರೆ, ಇಸ್ರೋದ ಕತ್ತು ಹಿಸುಕುತ್ತಿರುವುದು ಏಕೆ? ಸುಮಾರು 100-120 ಪ್ರಮುಖ ಇಸ್ರೋ ವೃತ್ತಿಪರರು ಕಳೆದ ಕೆಲವೇ ತಿಂಗಳುಗಳಲ್ಲಿ ಸಂಸ್ಥೆ ತೊರೆದಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಖಾಸಗಿ ವಲಯದ ಭಾಗವಹಿಸುವಿಕೆಯಿಂದ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಕುಗ್ಗುತ್ತಿಲ್ಲ. ಬದಲಾಗಿ ಮತ್ತಷ್ಟು ವಿಸ್ತಾರಗೊಳ್ಳುತ್ತಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಖಾಸಗಿ ಕೈಗಾರಿಕೆಗಳು ರಾಕೆಟ್, ಉಪಗ್ರಹ ತಯಾರಿಕೆ ಮತ್ತು ಉಡಾವಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದರೆ, ಇಸ್ರೋ ತನ್ನ ಸಂಪೂರ್ಣ ಗಮನವನ್ನು ಗಗನಯಾನ, ಚಂದ್ರಯಾನ-4, ಭಾರತೀಯ ಅಂತರಿಕ್ಷ ನಿಲ್ದಾಣ, ಶುಕ್ರ, ಮಂಗಳ ಗ್ರಹಗಳ ಭವಿಷ್ಯದ ಮಹತ್ವಾಕಾಂಕ್ಷಿ ಯೋಜನೆಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತಿದೆ. ಇದು ಇಸ್ರೋವನ್ನು ದುರ್ಬಲಗೊಳಿಸುವ ನಡೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಸ್ರೋದ ಪ್ರಮುಖ ರಾಕೆಟ್ಗಳು