ನಿಮ್ಮ ವಾಟ್ಸ್ಆಪ್ ಸಂದೇಶಗಳು ನಿಜವಾಗಿಯೂ ಸುರಕ್ಷಿತವೇ? ಮೆಟಾ ಕಂಪನಿ ಬಳಸುವ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ತಂತ್ರಜ್ಞಾನ ಕೇವಲ ಒಂದು ಕಣ್ಕಟ್ಟು ಎಂದು ಆರೋಪಿಸಿ ಅಮೆರಿಕದಲ್ಲಿ ಗಂಭೀರ ಕಾನೂನು ಸಮರ ಶುರುವಾಗಿದೆ. ಬಳಕೆದಾರರ ಖಾಸಗಿ ಸಂಭಾಷಣೆಗಳನ್ನು ಕಂಪನಿ ಓದಬಲ್ಲದು ಎಂದು ಕೇಸು ದಾಖಲಿಸಿದವರು ವಾದಿಸುತ್ತಿದ್ದು, ಈ ಮೊಕದ್ದಮೆ ಜಾಗತಿಕವಾಗಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ, ‘ಮೆಟಾ-ವಾಟ್ಸ್ಆಪ್ ಭಾರತದ ಕಾನೂನನ್ನು ಪಾಲಿಸಲಿ, ಇಲ್ಲವೆ ಭಾರತ ಬಿಟ್ಟು ಹೋಗಲಿ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀಕ್ಷ್ಣವಾಗಿ ಹೇಳಿದೆ. ಅಲ್ಲದೆ, ಭಾರತೀಯರ ಮಾಹಿತಿ ಶೇರ್ ಮಾಡಲು ಅನುಮತಿ ನೀಡುವುದಿಲ್ಲ ಎಂದಿರುವ ಸುಪ್ರೀಂಕೋರ್ಟ್ ವಾಟ್ಸ್ಆಪ್ನ ಪ್ರೖೆವಸಿ ನೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.