ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪೋಸ್ಟ್ಗೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದು, "ಗ್ರಾಹಕರ ವಿವರಗಳನ್ನು ಹೊಂದಿರುವ ಕಾಗದಗಳನ್ನು ರಸ್ತೆಬದಿಯ ಆಹಾರ ಮಾರಾಟಗಾರರ ಕೈಗೆ ತಲುಪಿದ್ದಾದರೂ ಹೇಗೆ? ಎಂದು ಒಬ್ಬ ಬಳಕೆದಾರ ಕೇಳಿದರೆ, ಗ್ರಾಹಕರ ಮಾಹಿತಿಯುಳ್ಳ ಕಾಗದಗಳನ್ನು ವಿಲೇವಾರಿ ಮಾಡಲು ಯಾವುದೇ ಕಾನೂನು ಮಾನದಂಡಗಳಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಭಾರತದಲ್ಲಿ ಗ್ರಾಹಕರ ಮಾಹಿತಿ ಎಷ್ಟು ಗೌಪ್ಯವಾಗಿದೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ,(ಏಜನ್ಸೀಸ್).