ಲಿವರ್, ಗ್ಯಾಸ್ಟ್ರೋಎಂಟರಾಲಜಿ ಮತ್ತು ಪ್ಯಾಂಕ್ರಿಯಾಟಿಕೊ-ಬಿಲಿಯರಿ ತಜ್ಞರ ಪ್ರಕಾರ ಜಂಕ್ ಫುಡ್ ಸೇವನೆಯಿಂದ ಸಾವು ಉಂಟಾಗುತ್ತದೆ ಎನ್ನುವುದು ಸುಳ್ಳೆಂದು ಹೇಳುತ್ತಾರೆ. ಫಾಸ್ಟ್ ಫುಡ್ ತಿನ್ನುವುದರಿಂದ ಕರಳುಗಳಲ್ಲಿ ರಂಧ್ರಗಳು ಉಂಟಾಗುವುದಿಲ್ಲ, ಆದರೆ ಅತೀಯಾದ ಫಾಸ್ಟ್ ಫುಡ್ ಸೇವನೆಯಿಂದ ಹೆಚ್ಚೆಂದರೆ ಜೀರ್ಣಕ್ರಿಯೆ ನಿಧಾನವಾಗಬಹುದು ಎಂದಿದ್ದಾರೆ. ಫಾಸ್ಟ್ ಫುಡ್ ಮತ್ತು ಹೆಚ್ಚು ಸಂಸ್ಕರಿಸಿದ ಆಹಾರಗಳನ್ನು ನಿರಂತರವಾಗಿ ಸೇವಿಸುವುದರಿಂದ ಅಪೌಷ್ಟಿಕತೆ, ಯಕೃತ್ತಿನ ಸಮಸ್ಯೆಗಳು, ಬೊಜ್ಜು ಮತ್ತು ಗ್ಯಾಸ್ ನಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು ವಿನಃ ನೇರವಾಗಿ ಸಾವು ಉಂಟಾಗುವುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳುತ್ತಾರೆ,(ಏಜನ್ಸೀಸ್).