ನೀವು ತಿನ್ನುವ ಆಹಾರ ನಕಲಿಯೇ? ರಾಜಸ್ಥಾನ-ಜಾರ್ಖಂಡ್‌ನಲ್ಲಿ ಬೃಹತ್ ದಾಳಿ; 150 ಟನ್ ಕಲಬೆರಕೆ ಪದಾರ್ಥಗಳು ವಶ!Adulterated Food

ಅವಧಿ ಮೀರಿದ 150 ಟನ್ ನಕಲಿ ಆಹಾರ (Adulterated Food) ಪದಾರ್ಥಗಳನ್ನು ವಶ
ಅವಧಿ ಮೀರಿದ 150 ಟನ್ ನಕಲಿ ಆಹಾರ (Adulterated Food) ಪದಾರ್ಥಗಳನ್ನು ವಶ
Published on
ರಾಜಸ್ಥಾನ/ಜಾರ್ಖಂಡ್: ಭಾರತದಲ್ಲಿ ದಿನೇ-ದಿನೇ ನಕಲಿ ಆಹಾರ ಪದಾರ್ಥಗಳ ಮಾರಾಟ ಹೆಚ್ಚಾಗುತ್ತಿದ್ದು, ರಾಜಸ್ಥಾನ ಹಾಗೂ ಜಾರ್ಖಂಡ್​ನಲ್ಲಿ ಆರೋಗ್ಯ ಪರೀಕ್ಷಕ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸರಿ ಸುಮಾರು 150 ಟನ್​ ಕಲಬೆರಕೆ (Adulterated Food) ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ ಕುರಿತು ವರದಿಯಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋನಲ್ಲಿ, ರಾಜಸ್ಥಾನ ಹಾಗೂ ಜಾರ್ಖಂಡನಲ್ಲಿ ಸುಮಾರಿ 1.5 ಲಕ್ಷ ಕಿಲೋಗ್ರಾಂ ಅಂದರೆ 150 ​ಟನ್​ ಕಲಬೆರಕೆ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದೆ.
ಈ ಜಪ್ತಿಯಾದ ಪದಾರ್ಥಗಳಲ್ಲಿ, ನೂಡಲ್ಸ್, ಸಾಸ್‌ಗಳು ಮತ್ತು ಮೇಯನೇಸ್ ಸೇರಿದಂತೆ 25 ಕ್ಕೂ ಹೆಚ್ಚಿನ ಆಹಾರ ಪದಾರ್ಥಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ದಾಳಿಯ ಸಂದರ್ಭದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಪ್ಯಾಕೆಟ್​ ಮೇಲೆ ಮರು ಮುದ್ರಣ ಮಾಡಲು ಅತ್ಯಾಧುನಿಕ ಯಂತ್ರಗಳನ್ನು ಬಳಸುತ್ತಿದ್ದು, ಈ ಯಂತ್ರಗಳನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯಂತ್ರಗಳನ್ನು ಬಳಸಿಕೊಂಡು ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮರು ಮುದ್ರಣ ಮಾಡಿ ಹೊಸ ಆಹಾರವೆಂದು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಇದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ದ ನಿಯಮಗಳ ವಿರುದ್ಧವಾಗಿದ್ದು, ಆದ್ದರಿಂದ ಜಪ್ತಿಯಾದ ಎಲ್ಲಾ ಆಹಾರ ಪದಾರ್ಥಗಳನ್ನು ನಾಶ ಪಡಿಸುವುದಾಗಿ ಮತ್ತು ಆರೋಪಿಗಳ ಮೇಲೆ ಆಹಾರ ಪೂರೈಕೆ ಉಲ್ಲಂಘನೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net