ತೆಲಂಗಾಣ ನಾಲ್ಕು ಕೋಟಿ ಜನರ ಆಸ್ತಿ, ನಮ್ಮಪ್ಪಂದಿರ ಆಸ್ತಿಯೇ? ನಿಮಗೇನು ಇಲ್ಲಿ ಕೆಲಸ: ಪವನ್ ಕಲ್ಯಾಣ್ ವಿರುದ್ಧ ಸಚಿವ ಪೊನ್ನಂ ವಾಗ್ದಾಳಿ | Pawan Kalyan

ಸಚಿವ ಪೊನ್ನಂ ಪ್ರಭಾಕರ್ ಮತ್ತು ಪವನ್ ಕಲ್ಯಾಣ್
ಸಚಿವ ಪೊನ್ನಂ ಪ್ರಭಾಕರ್ ಮತ್ತು ಪವನ್ ಕಲ್ಯಾಣ್
Published on
ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರ v/s ಪವನ್ ಕಲ್ಯಾಣ್(Pawan Kalyan) ವಿವಾದ ಜೋರಾಗಿದ್ದು, ಹೈದರಾಬಾದ್​​ನಲ್ಲಿರಬೇಡಿ ಎನ್ನಲು ನಿಮ್ಮಪ್ಪಂದಿರ ಆಸ್ತಿಯೇ ಎಂಬ ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್​ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಪೊನ್ನಂ ಪ್ರಭಾಕರ್, ತೆಲಂಗಾಣ ನಾಲ್ಕು ಕೋಟಿ ಜನರ ಆಸ್ತಿ, ನಮ್ಮಪ್ಪಂದಿರ ಆಸ್ತಿಯೇ? ನಿಮಗೇನು ಇಲ್ಲಿ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್​ನಲ್ಲಿ ಈ ಕುರಿತು ಮಾತನಾಡಿರುವ ಅವರು, ಪವನ್ ಕಲ್ಯಾಣ್ ಒಬ್ಬ ದುಡ್ಡು ತಗೊಂಡು ನಟನೆ ಮಾಡುವ ಕಲಾವಿದ. ಮತ್ತು ತೆಲಂಗಾಣ ರಚನೆಯನ್ನು ವಿರೋಧಿಸಿದ ವ್ಯಕ್ತಿ ಪವನ್ ಕಲ್ಯಾಣ್​, ಇಲ್ಲಿ ಏನು ಮಾಡುತ್ತಿದ್ದಾರೆ?, ಗದ್ದರ್​ಗೆ ಕಾರು ಕೊಡಿಸಿದ್ದೇನೆ ಎಂಬ ಮಾತಿಗೆ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಆಂಧ್ರದಲ್ಲಿ ತನಗೆ ಸಿಎಂ ಆಗಲು ಸಾಧ್ಯವಾಗಿಲ್ಲ ಎಂಬ ಪವನ್ ಕಲ್ಯಾಣ್ ಮಾತಿಗೆ ವ್ಯಂಗ್ಯವಾಡಿರುವ ಅವರು, ಪ್ರತ್ಯೇಕ ರಾಜ್ಯ ಹೋರಾಟ ಸಮಯದಲ್ಲಿಯೂ ನಾವು ಆಂಧ್ರ ಜನರ ಬಗ್ಗೆ ಏನನ್ನೂ ಹೇಳಲಿಲ್ಲ. ಈಗ ಪವನ್ ಕಲ್ಯಾಣ್ ನಾವು ಆಂಧ್ರ ಜನರ ವಿರುದ್ಧ ಮಾತಾಡ್ತಿದ್ದೇವೆ ಎಂದು ಸುಳ್ಳು ಹೇಳ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ನೀಡಿದ್ದ ಸಂಸತ್​ ಮುಚ್ಚಿ ಆಂಧ್ರ ಪ್ರದೇಶ ವಿಭಜನೆ ಮಸೂದೆಯನ್ನು ಮಂಡಿಸಲಾಯಿತು ಎಂಬ ಪವನ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಂಸತ್ತಿನಲ್ಲಿ ಯಾವುದೇ ಮಸೂದೆ ಅಂಗೀಕರಿಸಿದ್ರೂ ಅದನ್ನು ಮುಚ್ಚಿದ ಬಾಗಿಲು ಹಿಂದೆಯೇ ಅಂಗೀಕಾರಿಸಲಾಗುತ್ತದೆ. ತೆಲಂಗಾಣ ರಚನೆ ದಿನವೇ ಸಭೆ ನಡೆಸುವುದು ಸರಿಯೇ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಪವನ್ ಕಲ್ಯಾಣ್ ಇಲ್ಲಿ ರಾಜಕಾರಣಕ್ಕೆ ಬರುತ್ತಾರೋ ಇಲ್ಲವೋ ಎಂಬುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ಬಂದ್ರೆ ನೋಡೋಕೆ ಜನ ಹೋಗ್ತಾರೆ ವಿನಃ ಮತ ಹಾಕಲ್ಲ. ಅವರು ನಟನಾಗಿ ಎಲ್ಲಿಗೂ ಹೋದ್ರು ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net