ಏಷ್ಯಾದ ಕ್ರಿಕೆಟ್ ಸಾಮ್ರಾಜ್ಯಕ್ಕೆ ಅಂತ್ಯಕಾಲ..? ಸೂಪರ್-8ರಲ್ಲಿ ಭಾರತ, ಪಾಕ್, ಲಂಕಾ ತಂಡಗಳ ದಯನೀಯ ಸ್ಥಿತಿಯ ಹಿಂದಿನ ಗುಟ್ಟೇನು..? Asian cricket

ಏಷ್ಯಾದ ಕ್ರಿಕೆಟ್ ಸಾಮ್ರಾಜ್ಯಕ್ಕೆ ಅಂತ್ಯಕಾಲ..? ಸೂಪರ್-8ರಲ್ಲಿ ಭಾರತ, ಪಾಕ್, ಲಂಕಾ ತಂಡಗಳ ದಯನೀಯ ಸ್ಥಿತಿಯ ಹಿಂದಿನ ಗುಟ್ಟೇನು..?
ಏಷ್ಯಾದ ಕ್ರಿಕೆಟ್ ಸಾಮ್ರಾಜ್ಯಕ್ಕೆ ಅಂತ್ಯಕಾಲ..? ಸೂಪರ್-8ರಲ್ಲಿ ಭಾರತ, ಪಾಕ್, ಲಂಕಾ ತಂಡಗಳ ದಯನೀಯ ಸ್ಥಿತಿಯ ಹಿಂದಿನ ಗುಟ್ಟೇನು..?
Published on
ನವದೆಹಲಿ: ಕ್ರಿಕೆಟ್ ಲೋಕದ ದೈತ್ಯ ಶಕ್ತಿಗಳಾದ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು 2026ರ ಟಿ20 ವಿಶ್ವಕಪ್‌ನಲ್ಲಿ ಅಸ್ತಿತ್ವದ ಹೋರಾಟ ನಡೆಸುತ್ತಿವೆ. ಸೂಪರ್-8 ಹಂತದ ನಿರ್ಣಾಯಕ ಘಟ್ಟದಲ್ಲಿ ಈ ಮೂರೂ ತಂಡಗಳು ಸೋಲಿನ ಸುಳಿಯಲ್ಲಿ ಸಿಲುಕಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್‌ನಲ್ಲಿ ಒಂದೂ ಏಷ್ಯನ್ ತಂಡವಿಲ್ಲದ(Asian cricket) ಕಪ್ಪು ದಾಖಲೆ ನಿರ್ಮಾಣವಾಗುವ ಸಾಧ್ಯತೆ ದಟ್ಟವಾಗಿದೆ.

ಟೀಂ ಇಂಡಿಯಾಗೆ ಸೌತ್ ಆಫ್ರಿಕಾ ಶಾಕ್..!

ಹಾಲಿ ಚಾಂಪಿಯನ್ ಭಾರತವು ಸೂಪರ್-8ರ ತನ್ನ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲು ಕಂಡಿದೆ. ಅಹಮದಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಸಂಪೂರ್ಣ ಕುಸಿತ ಕಂಡಿತು. ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಶೂನ್ಯ ಅಂಕದೊಂದಿಗೆ ಮೂರನೇ ಸ್ಥಾನದಲ್ಲಿರುವ ಭಾರತಕ್ಕೆ, ಮುಂದಿನ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳು ಜೀವನ್ಮರಣ ಹೋರಾಟವಾಗಿವೆ. ರನ್ ರೇಟ್ ಕೂಡ ಮೈನಸ್‌ನಲ್ಲಿರುವುದು ಸೂರ್ಯಕುಮಾರ್ ಪಡೆಗೆ ನಡುಕ ಹುಟ್ಟಿಸಿದೆ.

ಪಾಕಿಸ್ತಾನ ಮತ್ತು ಶ್ರೀಲಂಕಾಗೆ ಇಂಗ್ಲೆಂಡ್ ಪೆಟ್ಟು

ಮತ್ತೊಂದೆಡೆ ಗ್ರೂಪ್-2ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ.
ಪಾಕಿಸ್ತಾನ: ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾದ ನಂತರ, ಇಂಗ್ಲೆಂಡ್ ವಿರುದ್ಧದ ರೋಚಕ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಸೋತ ಪಾಕಿಸ್ತಾನ ಈಗ ಕೇವಲ 1 ಅಂಕ ಹೊಂದಿದೆ. ಫೆಬ್ರವರಿ 28ರಂದು ಶ್ರೀಲಂಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೆದ್ದರೂ, ಪಾಕ್ ತಂಡ ಸೆಮಿಫೈನಲ್‌ಗೆ ಹೋಗಲು ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.
ಶ್ರೀಲಂಕಾ: ಸಹ-ಆತಿಥೇಯ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ 51 ರನ್‌ಗಳಿಂದ ಸೋತು ತನ್ನ ಖಾತೆಯನ್ನೇ ತೆರೆದಿಲ್ಲ. ಸ್ಪಿನ್ ಬೌಲಿಂಗ್ ನೆರವಾಗುತ್ತಿದ್ದರೂ ಬ್ಯಾಟಿಂಗ್ ವೈಫಲ್ಯ ಲಂಕನ್ನರನ್ನು ಕಾಡುತ್ತಿದೆ.

ಏಷ್ಯನ್ ಕ್ರಿಕೆಟ್‌ನ 'ಕರಾಳ ಅಧ್ಯಾಯ..?

ಟಿ20 ವಿಶ್ವಕಪ್ ಇತಿಹಾಸದಲ್ಲಿ ಕನಿಷ್ಠ ಒಂದು ಏಷ್ಯನ್ ತಂಡವಾದರೂ ಸೆಮಿಫೈನಲ್ ತಲುಪುವ ಸಂಪ್ರದಾಯ ಇತ್ತು. ಆದರೆ ಈ ಬಾರಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಅಬ್ಬರ ನೋಡಿದರೆ, ಏಷ್ಯಾದ ಮೂರೂ ದೈತ್ಯರು ಲೀಗ್ ಹಂತದಲ್ಲೇ ಹೊರಬೀಳುವ ಲಕ್ಷಣಗಳು ಕಾಣುತ್ತಿವೆ. ಆಫ್ಘಾನಿಸ್ತಾನ ಈಗಾಗಲೇ ಲೀಗ್ ಹಂತದಲ್ಲೇ ಸೋತು ಮನೆ ಸೇರಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net