ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿದೆಯೇ ಗ್ರೋಕ್ ಎಐ? ನಕಲಿ ಅಶ್ಲೀಲ ಚಿತ್ರಗಳ ಹಾವಳಿ ತಡೆಯಲು ಮುಂದಾದ ಕೇಂದ್ರ ಸರ್ಕಾರ | Grok Ai

 Grok Ai
Grok Ai
Published on
ನವದೆಹಲಿ: ಅಶ್ಲೀಲ, ನಗ್ನ, ಅಸಭ್ಯ ಮತ್ತು ಲೈಂಗಿಕತೆಗೆ ಸಂಬಂಧಿಸಿದ ವಿಷಯಗಳನ್ನು ತಕ್ಷಣವೇ ತೆಗೆದುಹಾಕಲು ಮತ್ತು ನಿಷ್ಕ್ರಿಯಗೊಳಿಸಲು ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆ X (ಟ್ವಿಟರ್) ಗೆ ಆದೇಶಿಸಿದೆ.
ಈ ರೀತಿಯ ವಿಷಯಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಮತ್ತು ಐಟಿ ನಿಯಮಗಳ ವಿರುದ್ಧವಾಗಿದ್ದು ಕೂಡಲೇ ಈ ತೆರೆನಾದ ವಿಷಯಗಳ ರದ್ಧತಿಗೆ ಆಗ್ರಹಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಲೋನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಯ ಮುಖ್ಯ ಅನುಸರಣಾ ಅಧಿಕಾರಿಗೆ ಬರೆದ ಪತ್ರದಲ್ಲಿ, ಗ್ರೋಕ್‌(Grok Ai)ನ ಸಮಗ್ರ ಪರಿಶೀಲನೆಯನ್ನು ಕೈಗೊಂಡು ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕುವಂತೆ ಸೂಚಿಸಿದೆ.
ಗ್ರೋಕ್ AI ಎಂಬ ಸೇವೆಯನ್ನು ಬಳಕೆದಾರರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಮಹಿಳೆಯರ ಅಶ್ಲೀಲ ಚಿತ್ರಗಳು ಅಥವಾ ವೀಡಿಯೊಗಳನ್ನು ಅವಹೇಳನಕಾರಿ ಅಥವಾ ಅಸಭ್ಯ ರೀತಿಯಲ್ಲಿ ಪೋಸ್ಟ್​ ಮಾಡಲು, ಅಥವಾ ಹಂಚಿಕೊಳ್ಳಲು ನಕಲಿ ಖಾತೆಗಳನ್ನು ರಚಿಸುತ್ತಿದ್ದಾರೆ ಎಂದು ವಿಶೇಷವಾಗಿ ಗಮನಿಸಲಾಗಿದೆ ಎಂದು ಪತ್ರದಲ್ಲಿ ನಮೂದಿಸಲಾಗಿದೆ.

ಗ್ರೋಕ್‌ ಎಐ ಮಹಿಳೆಯ ಗೌರವಕ್ಕೆ ಧಕ್ಕೆ ತರುತ್ತಿದೆ : ಪ್ರಿಯಾಂಕಾ ಚತುರ್ವೇದಿ

ಗ್ರೋಕ್‌ ಎಐನ್ನು ಮಹಿಳೆಯರ ಅರೆನಗ್ನ ಫೋಟೋಗಳನ್ನು ಅಪ್‌ಲೋಡ್ ಮಾಡಲು ಮತ್ತು ಅವರ ಮೈಮೇಲಿನ ಬಟ್ಟೆಗಳನ್ನು ಕಡಿಮೆ ಮಾಡಲು ಮತ್ತು ಅವರನ್ನು ಲೈಂಗಿಕವಾಗಿ ಬಿಂಬಿಸಲು AI ಬಾಟ್‌ಗೆ ಸೂಚನೆಗಳನ್ನು ನೀಡಲು ನಕಲಿ ಖಾತೆಗಳನ್ನು ಬಳಸಲಾಗುತ್ತಿದೆ. ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net