ಎಲ್ಲಾ ದೆಹಲಿಯಲ್ಲೇ ನಿರ್ಧಾರ... ಬಿಜೆಪಿ ಸ್ಥಳೀಯ ನಾಯಕರ ಮಾತಿಗೆ ಬೆಲೆ ಕೊಡಲ್ಲ ಅಂದ್ರು ಪಂಜಾಬ್‌ ಮಾಜಿ ಸಿಎಂ | Amarinder Singh

ಪಂಜಾಬ್​ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್
ಪಂಜಾಬ್​ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್
Published on
ಚಂಡೀಗಢ: ಬಿಜೆಪಿ ತನ್ನ ವಿಧಾನದಲ್ಲಿ ಕಠಿಣವಾಗಿ ಕಾಣುತ್ತದೆ, ಆದರೆ ಕಾಂಗ್ರೆಸ್ ಪಕ್ಷವು ಸಾಂಪ್ರದಾಯಿಕವಾಗಿ ಹೆಚ್ಚು ಹೊಂದಿಕೊಳ್ಳುವ ಮತ್ತು ಸಮಾಲೋಚನಾ ಶೈಲಿಯ ರಾಜಕೀಯವನ್ನು ಅನುಸರಿಸುತ್ತದೆ ಎಂದು ಪಂಜಾಬ್​ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ವಪಕ್ಷದ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿರ್ಧಾರಗಳನ್ನು ದೆಹಲಿಯಲ್ಲಿ ತೆಗೆದುಕೊಳ್ಳಲಾಗುತ್ತದೆ

ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಮರಿಂದರ್ ಸಿಂಗ್, ಬಿಜೆಪಿಯಲ್ಲಿ ಸ್ಥಳೀಯ ನಾಯಕರನ್ನು ಸಂಪರ್ಕಿಸುವುದೇ ಕಡಿಮೆ, 60 ವರ್ಷಗಳಿಗೂ ಹೆಚ್ಚು ರಾಜಕೀಯ ಅನುಭವ ಹೊಂದಿದ್ದರೂ, ಪಕ್ಷದಲ್ಲಿ ಯಾರೂ ನನ್ನ ಸಲಹೆಯನ್ನು ಕೇಳುವುದಿಲ್ಲ. ಎಲ್ಲಾ ನಿರ್ಧಾರಗಳನ್ನು ದೆಹಲಿಯಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಬಿಜೆಪಿ ತೊರೆಯುತ್ತಾರಾ ಅಮರಿಂದರ್ ಸಿಂಗ್..?

ಮಾಜಿ ಸಿಎಂ ಅಮರಿಂದರ್ ಸಿಂಗ್ ಅಸಮಧಾನದ ಹೇಳಿಕೆಗಳು ಬಿಜೆಪಿ ತೊರೆಯುತ್ತಾರಾ ಎಂಬ ಊಹಾಪೋಹಗಳಿಗೆ ಕಾರಣವಾಗಿದ್ದು, ಕಾಂಗ್ರೆಸ್‌ಗೆ ಮರಳುವ ಸಾಧ್ಯತೆಯನ್ನು ತಳ್ಳಿಹಾಕಿದರು. ನನ್ನನ್ನು ಬಲವಂತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ರೀತಿ ಇನ್ನೂ ನನಗೆ ನೋವುಂಟುಮಾಡುತ್ತಿದೆ. ಮತ್ತೆ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದರು. ಪಕ್ಷದ ಆಂತರಿಕ ಕಾರ್ಯವೈಖರಿಯ ಬಗ್ಗೆ ಟೀಕಿಸಿದರೂ, ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಸಿಂಗ್, ಪ್ರಧಾನಿಯವರು ಪಂಜಾಬ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ, ರಾಜ್ಯದ ಅಭಿವೃದ್ದಿಗೆ ಅಗತ್ಯವಿರುವ ಎಲ್ಲವನ್ನೂ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿನ ಬಿಜೆಪಿಯ ಭವಿಷ್ಯದ ಬಗ್ಗೆ ಮಾತನಾಡಿದ ಸಿಂಗ್, ಶಿರೋಮಣಿ ಅಕಾಲಿ ದಳದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಮಾತ್ರ ಪಕ್ಷವು ತನ್ನ ಸಂಘಟನೆಯನ್ನು ಬಲಪಡಿಸಬಹುದು ಎಂದರು. ಈ ಮೈತ್ರಿ ಏರ್ಪಡದಿದ್ದರೆ ಪಂಜಾಬ್‌ನಲ್ಲಿ ಬಿಜೆಪಿ ತನ್ನ ನೆಲೆಯನ್ನು ವಿಸ್ತರಿಸುವುದು ಕಷ್ಟಕರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ನವಜೋತ್ ಸಿಂಗ್ ಸಿಧು ಬಗ್ಗೆ ಟೀಕೆ..

ಸಕ್ರಿಯ ರಾಜಕಾರಣದಿಂದ ದೂರ ಸರಿದು ಕ್ರಿಕೆಟ್​ ವಿವರಣೆಯತ್ತ ಗಮನಹರಿಸುವಂತೆ ಅವರು ಸಿಧುಗೆ ಸಲಹೆ ನೀಡಿದ ಅಮರಿಂದರ್​ ಸಿಂಗ್​, ಈ ಹಿಂದೆ ತಮ್ಮ ಸಂಪುಟದಲ್ಲಿ ಎರಡು ಪ್ರಬಲ ಖಾತೆಗಳನ್ನು ನೀಡಿದ್ದರೂ ಸಿಧು ಅತೃಪ್ತರಾಗಿದ್ದರು ಎಂದು ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net