ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ದಿಗ್ಗಜ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮನವರ ಅಗಲಿಕೆಯಿಂದ ಭಾರತವು ಒಬ್ಬ ಸಂಗೀತ ರತ್ನವನ್ನು ಕಳೆದುಕೊಂಡಿದೆ. ಅವರ ಅಸಾಧಾರಣ ಗಾಯನವು ಪೀಳಿಗೆಗಳನ್ನು ಮಂತ್ರಮುಗ್ಧಗೊಳಿಸಿತ್ತು. ಅವರ ಸುದೀರ್ಘ ವೃತ್ತಿಜೀವನವು ಆರು ದಶಕಗಳಿಗೂ ಹೆಚ್ಚು ಕಾಲ ವಿಸ್ತರಿಸಿದ್ದು, ಈ ಅವಧಿಯಲ್ಲಿ ಅವರು ಹಿಂದಿ, ಒಡಿಯಾ, ತುಳು, ಉರ್ದು, ಪಂಜಾಬಿ ಮತ್ತು ಬಂಗಾಳಿ ಸೇರಿದಂತೆ ಸುಮಾರು 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರ ಎಂದೂ ಮಾಸದ ಸಂಗೀತವು ಯಾವಾಗಲೂ ಅಮೂಲ್ಯವಾಗಿ ಉಳಿಯುತ್ತದೆ. ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಭಾವಪೂರ್ಣ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ಅವರು ಬರೆದಿದ್ದಾರೆ.