ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ; ಜಾರ್ಖಂಡ್​ನಲ್ಲಿ ತೀವ್ರಗೊಂಡ ವಿದ್ಯಾರ್ಥಿಗಳ ಪ್ರತಿಭಟನೆ: ವಿಧಾನಸಭೆಯತ್ತ ಬೃಹತ್ ಮೆರವಣಿಗೆ | Student protests

ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ
ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ
Published on
ರಾಂಚಿ: ಜಾರ್ಖಂಡ್‌ನಲ್ಲಿ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ(Student protests) 17ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು(ಆ. 10) ಸಾವಿರಾರು ಉದ್ಯೋಗ ಆಕಾಂಕ್ಷಿಗಳು ರಾಜ್ಯ ವಿಧಾನಸಭೆಯನ್ನು ಮುತ್ತಿಗೆ ಹಾಕಲು ಬೃಹತ್ ಮೆರವಣಿಗೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ತ್ರಿವರ್ಣ ಧ್ವಜ ಮತ್ತು ಫಲಕ ಹಿಡಿದುಕೊಂಡು, ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಾ, ಧುರ್ವಾದ ಹಳೆಯ ವಿಧಾನಸಭಾ ಸಂಕೀರ್ಣದ ಹೊರಗಿನಿಂದ ಹೊಸ ವಿಧಾನಸಭೆಯತ್ತ ತೆರಳುತ್ತಿದ್ದಾರೆ. ಈ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದ್ದು, ನಾಲ್ಕು ಕಿಲೋಮೀಟರ್ ಮಾರ್ಗದುದ್ದಕ್ಕೂ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.
ಇನ್ನೂ ಪ್ರತಿಭಟನೆಯಲ್ಲಿ ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜೆಎಲ್‌ಕೆಎಂ ನಾಯಕ ದೇವೇಂದ್ರ ನಾಥ್ ಮಹ್ತೊ ಅವರನ್ನು ವಿದ್ಯಾರ್ಥಿಗಳು ಹೊತ್ತು ಸಾಗಿದರು. ಅವರು ಈ ವೇಳೆ ಮಾಜಿ ಸಿಎಂ ಶಿಬು ಸೊರೆನ್ ಅವರ ಭಾವಚಿತ್ರ ಹಿಡಿದಿರುವುದು ಕಂಡು ಬಂದಿದೆ. 
ಇನ್ನೂ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಿರುವ ಸಚಿವೆ ದೀಪಿಕಾ ಪಾಂಡೆ ಸಿಂಗ್, ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಅಭ್ಯರ್ಥಿಗಳು ಶಾಂತಿಯುತವಾಗಿ ಪ್ರತಿಭಟಿಸಲು ಸರ್ಕಾರ ಅವಕಾಶ ನೀಡುತ್ತದೆ. ಅವರ ವಿರುದ್ಧ ಪೆಲೆಟ್ ಗನ್, ಅಶ್ರುವಾಯು ಅಥವಾ ಲಾಠಿ ಚಾರ್ಜ್ ಬಳಸಲಾಗುವುದಿಲ್ಲ ಎಂದು ಭರವಸೆ ನೀಡಿದರು.
ಜೊತೆಗೆ ವಿಧಾನ ಸಭಾ ಘೇರಾವ್ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಆಡಳಿತವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹಾಗೂ ಕಳೆದ ನಾಲ್ಕು ದಿನಗಳಿಂದ ಗಂಟೆಗಟ್ಟಲೆ ಚರ್ಚೆಗಳು ನಡೆದಿವೆ ಮತ್ತು ಸರ್ಕಾರವು ತನ್ನ ಅಧಿಕಾರದ ವ್ಯಾಪ್ತಿಗೆ ಬರುವ ಬಹುತೇಕ ವಿದ್ಯಾರ್ಥಿಗಳ ಎಲ್ಲಾ ಬೇಡಿಕೆಗಳಿಗೆ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.

ಆದಾಗ್ಯೂ, JSSC-CGL ಪರೀಕ್ಷೆಯನ್ನು ರದ್ದುಗೊಳಿಸುವ ವಿದ್ಯಾರ್ಥಿಗಳ ಬೇಡಿಕೆಯು ನ್ಯಾಯಾಂಗ ನಿರ್ದೇಶನಗಳಿಗೆ ಸಂಬಂಧಿಸಿದೆ. ಮತ್ತು ರಾಜ್ಯ ಸರ್ಕಾರದಿಂದ ಮಾತ್ರ ಅದನ್ನು ನಿರ್ಧರಿಸಲು ಸಾಧ್ಯವಿಲ್ಲ. ಸರ್ಕಾರ ತನಿಖೆಯನ್ನು ಮುಕ್ತವಾಗಿಟ್ಟಿದೆ ಮತ್ತು ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಸಿದ್ಧವಾಗಿದೆ. ಆರ್ಥಿಕ ದುರುಪಯೋಗದ ಆರೋಪಗಳ ತನಿಖೆಗಾಗಿ ರಾಜ್ಯವು ಜಾರಿ ನಿರ್ದೇಶನಾಲಯವನ್ನು ಸಹ ಆಹ್ವಾನಿಸಿದೆ ಎಂದಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net