ಕಳೆದ ಫೆಬ್ರವರಿ 28 ರಂದು ನಡೆದ ಮಿಲಿಟರಿ ಸಂಘರ್ಷದಲ್ಲಿ ಅಲಿ ಖಮೇನಿ ಮೃತಪಟ್ಟಿದ್ದರು. ಇರಾನ್‌ನೊಂದಿಗೆ ಭಾರತಕ್ಕೆ ಇಂಧನ, ವಾಣಿಜ್ಯ ಮತ್ತು ಚಬಹಾರ್ ಬಂದರಿನಂತಹ ಆಯಕಟ್ಟಿನ ಕಾರ್ಯತಂತ್ರದ ಸಂಬಂಧಗಳಿವೆ. ಆದರೆ, ಅದೇ ಸಮಯದಲ್ಲಿ ಅಮೆರಿಕ ಮತ್ತು ಇಸ್ರೇಲ್‌ನೊಂದಿಗೂ ಭಾರತ ಅತ್ಯಂತ ಆಪ್ತ ರಕ್ಷಣಾ ಹಾಗೂ ರಾಜತಾಂತ್ರಿಕ ಒಡನಾಟ ಹೊಂದಿದ್ದು, ಈಗ ಯಾರನ್ನೂ ಎದುರು ಹಾಕಿಕೊಳ್ಳಲಾಗದ ಇಕ್ಕಟ್ಟಿಗೆ ನವದೆಹಲಿ ಸಿಲುಕಿದೆ.