ಸೆಂಚುರಿಯತ್ತ ಐಪಿಒ

ಐಪಿಓ
ಐಪಿಓ
Published on
ನವದೆಹಲಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಚಟುವಟಿಕೆಗಳು ರೋಮಾಂಚಕ ಹಂತಕ್ಕೆ ತಲುಪಿವೆ. ಈ ವರ್ಷದಲ್ಲಿ ಇಲ್ಲಿಯವರೆಗೆ 90ಕ್ಕೂ ಹೆಚ್ಚು ಐಪಿಒಗಳು ಬಿಡುಗಡೆಯಾಗಿದ್ದು ಇದು 2024ರಲ್ಲಿ ಬಿಡುಗಡೆಯಾದ 83 ಐಪಿಒಗಳ ದಾಖಲೆಯನ್ನು ಮುರಿದಿದೆ. ಇದೇ ಡಿಸೆಂಬರ್​ನಲ್ಲಿ ಇನ್ನೂ 8-10 ಕಂಪನಿಗಳು ತಮ್ಮ ಐಪಿಒಗಳನ್ನು ಬಿಡುಗಡೆ ಮಾಡುವುದಾಗಿ ಈಗಾಗಲೇ ಘೊಷಿಸಿವೆ. 
ಇದರಿಂದಾಗಿ 2025ರಲ್ಲಿ ಬಿಡುಗಡೆಯಾದ ಐಪಿಒಗಳ ಸಂಖ್ಯೆ 100ಕ್ಕೂ ಅಧಿಕವಾಗುವುದು ಖಚಿತವಾಗಿದೆ. ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿ, ಮೀಶೋ, ಕ್ಲೀನ್​ವ್ಯಾಕ್ಸ್ ಎನ್​ವಿರೋ ಎನರ್ಜಿ, ಎಕ್ಸಿಕಾಂ ಟೆಲಿಕಾಂ, ಮಿಲ್ಕಿ ಮಿಸ್ಟ್ ಡೇರಿ, ಬೋಟ್ ಮುಂತಾದ ಕಂಪನಿಗಳ ಬಹು ರೋಚಕ ಐಪಿಒಗಳು ಪೈಪ್​ಲೈನ್​ನಲ್ಲಿವೆ. ಈ ಐಪಿಒ ಉತ್ಸಾಹದ ಹಿನ್ನೆಲೆಯಲ್ಲಿ, ಭಾರತೀಯ ಮೂಲಧನ ಮಾರುಕಟ್ಟೆ ಐಪಿಒ ಫಂಡ್ ರೇಸ್ ಮಾಡುವ ವಿಶ್ವದ 4ನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಸಂಗ್ರಹಿಸಿದ ಒಟ್ಟು ಮೊತ್ತ 1.53 ಲಕ್ಷ ಕೋಟಿ ರೂ. ದಾಟಿದೆ. ಪ್ರಸಕ್ತ ವರ್ಷದ ಪ್ರಮುಖ ಯಶಸ್ವಿ ಮತ್ತು ವಿಫಲ ಐಪಿಒಗಳು, ಅವು ಸಂಗ್ರಹಿಸಿದ ಮೊತ್ತ, ಭವಿಷ್ಯದ ಸಾಧ್ಯತೆ ಮುಂತಾದ ವಿವರಗಳು ಇಲ್ಲಿವೆ.

ಕ್ರಮೇಣ ಕಳೆಗುಂದಿದ್ದುಂಟು. ಹಾಗಾಗಿ, ವಿದ್ಯಾರ್ಥಿ ಸಂಘಗಳ ಚುನಾವಣೆ ಮರುಜಾರಿ ಮಾಡುವ ಈ ಸಂದರ್ಭದಲ್ಲಿ ಎರಡೂ ದಿಕ್ಕಿನಲ್ಲಿ ಯೋಚಿಸಬೇಕು. ವಿದ್ಯಾರ್ಥಿ ಪ್ರತಿನಿಧಿತ್ವದ ಲಾಭಗಳನ್ನು ಬಳಸಿಕೊಳ್ಳುವ, ಆದರೆ ಹಿಂಸಾಚಾರಕ್ಕೆ ಎಡೆ ಮಾಡಿಕೊಡದಂತಹ ವ್ಯವಸ್ಥೆಯನ್ನು ರೂಪಿಸಬೇಕು. ಕಟ್ಟುನಿಟ್ಟಾದ ನಡವಳಿಕೆ ನಿಯಮಗಳನ್ನು ಜಾರಿ ಮಾಡಬೇಕು. ರಾಜಕೀಯ ಪಕ್ಷಗಳ ಜತೆ ತೊಡಗಿಸಿಕೊಳ್ಳುವುದಕ್ಕೆ ಮಿತಿ ಹೇರಬೇಕು. ಪಾರದರ್ಶಕ ಹಣಕಾಸು ನಿಯಮಗಳು ಮತ್ತು ತ್ವರಿತ ಶಿಸ್ತು ಕ್ರಮಗಳನ್ನು ಅನುಸರಿಸುವುದು ಕೂಡ ಅತ್ಯಗತ್ಯ.

ಈವರೆಗಿನ ಪ್ರಮುಖ ಐಪಿಒಗಳು

2025ರಲ್ಲಿ 90ಕ್ಕೂ ಹೆಚ್ಚು ಐಪಿಒಗಳು ಬಿಡುಗಡೆಯಾಗಿದ್ದು, ಇವುಗಳಲ್ಲಿ ಬೃಹತ್ ಕಂಪನಿಗಳ ಮೇನ್​ಬೋರ್ಡ್ ಐಪಿಒಗಳು ಮತ್ತು ಸ್ಮಾಲ್ ಆಂಡ್ ಮೀಡಿಯಂ ಎಂಟರ್​ಪ್ರೖೆಸ್​ಗಳ (ಎಸ್​ಎಂಇ) ಐಪಿಒಗಳು ಸೇರಿವೆ. ದೊಡ್ಡ ಐಪಿಒಗಳು ಉದ್ಯಮ, ತಂತ್ರಜ್ಞಾನ ಮತ್ತು ಗ್ರಾಹಕ ಉತ್ಪನ್ನ ಕ್ಷೇತ್ರಗಳಿಗೆ ತಮ್ಮ ಗಮನವನ್ನು ಕೇಂದ್ರೀಕರಿಸಿವೆ. ಕೆಲವು ಪ್ರಮುಖ ಐಪಿಒಗಳು ಇಂತಿವೆ.

  • ಟಾಟಾ ಕ್ಯಾಪಿಟಲ್: ಇದು 2025ರ ಅತಿದೊಡ್ಡ ಐಪಿಒಗಳಲ್ಲಿ ಒಂದು. 15,511 ಕೋಟಿ ರೂ. ಸಂಗ್ರಹಿಸಿದೆ. ಇದು ಆರ್ಥಿಕ ಸೇವೆಗಳ ಕ್ಷೇತ್ರದಲ್ಲಿ ಬಹು ದೊಡ್ಡದು.
  • ಎಚ್​ಡಿಎಫ್​ಸಿ ಫೈನ್ಯಾನ್ಷಿಯಲ್ ಸರ್ವೀಸಸ್: 12,500 ಕೋಟಿ ರೂ. ಸಂಗ್ರಹಿಸಿದೆ. ಬ್ಯಾಂಕಿಂಗ್ ಮತ್ತು ಸಾಲ ನೀಡಿಕೆ ಕ್ಷೇತ್ರಕ್ಕೆ ಗಮನ ಕೇಂದ್ರೀಕರಿಸಿದೆ.
  • ಎಲ್​ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ: 11,604 ಕೋಟಿ ರೂ. ಸಂಗ್ರಹಿಸಿದೆ, ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸಿದೆ.
  • ಹೆಕ್ಸ್​ವೇರ್ ಟೆಕ್ನಾಲಜೀಸ್: 8,750 ಕೋಟಿ ರೂ. ಸಂಗ್ರಹಿಸಿದೆ. ಐಟಿ ಸರ್ವೀಸಸ್​ನಲ್ಲಿ ಸಂಚಲನ ಸೃಷ್ಟಿಸಿದೆ.
  • ಹೈವೇ ಇನ್​ಫ್ರಾಸ್ಟ್ರಕ್ಚರ್: 316 ಕೋಟಿ ರೂ. ಸಂಗ್ರಹಿಸಿದೆ. ಆದರೆ 316 ಪಟ್ಟು ಸಬ್​ಸ್ಕ್ರಿಪ್ಷನ್ ಪಡೆದು ದೊಡ್ಡ ಲಿಸ್ಟಿಂಗ್ ಗೇನ್ ಪಡೆದಿದೆ.
  • ಇತರ ಗಮನಾರ್ಹ ಐಪಿಒಗಳು: ಅದರ್ ಎನರ್ಜಿ (2,980 ಕೋಟಿ ರೂ.), ವೀವರ್ಕ್ ಇಂಡಿಯಾ (3,000 ಕೋಟಿ ರೂ.), ಕ್ಯಾಪಿಲರಿ ಟೆಕ್ನಾಲಜೀಸ್, ಎಕ್ಸೆಲ್​ಸಾಫ್ಟ್ ಟೆಕ್ನಾಲಜೀಸ್. ಇವೆಲ್ಲ ಸೇರಿ ಒಟ್ಟು 1.53 ಲಕ್ಷ ಕೋಟಿ ರೂ. ಸಂಗ್ರಹಿಸಿವೆ.

ದೇಶದ ಆರ್ಥಿಕತೆಗೆ ಬೂಸ್ಟ್!

ಐಪಿಒಗಳಿಂದ ಪ್ರಸಕ್ತ ವರ್ಷ ಇಲ್ಲಿಯವರೆಗೆ 1.53 ಲಕ್ಷ ಕೋಟಿ ರೂ. ಸಂಗ್ರಹಿಸಲಾಗಿದೆ. ಇದು 2024ರಲ್ಲಿ ಸಂಗ್ರಹವಾದ ಮೊತ್ತಕ್ಕೆ ಸಮಾನವಾಗಿದೆ. ಆದರೆ ಈ ವರ್ಷ ಅಂತ್ಯವಾಗುವುದಕ್ಕೆ ಇನ್ನೂ ಸಮಯವಿದೆ. ಈವರೆಗಿನ ಅವಧಿಗೆ ಹೋಲಿಸಿದರೆ ಶೇ. 16ರಷ್ಟು ಹೆಚ್ಚು ಮೊತ್ತ ಸಂಗ್ರಹವಾದಂತಾಗಿದೆ. ಡಿಸೆಂಬರ್​ನಲ್ಲಿನ ಸಂಭಾವ್ಯ 30,000-40,000 ಕೋಟಿ ರೂ. ಸೇರಿದರೆ ಒಟ್ಟು ಮೊತ್ತ 1.8-1.9 ಲಕ್ಷ ಕೋಟಿ ರೂ.ಗೆ ತಲುಪುತ್ತದೆ. ಇದರಲ್ಲಿ ಶೇ. 67ರಷ್ಟು ಹಣವು ಆಫರ್ ಫಾರ್ ಸೇಲ್ (ಒಎಫ್​ಎಸ್) ಮೂಲಕ ಬಂದಿದ್ದು, ಪ್ರಮೋಟರ್​ಗಳು ಲಾಭ ಪಡೆಯುತ್ತಿದ್ದಾರೆ ಎಂಬ ಟೀಕೆಗಳೂ ಇವೆ. ಆದರೂ, ಇದು ಭಾರತೀಯ ಆರ್ಥಿಕತೆಗೆ ಬೂಸ್ಟ್ ನೀಡಿರುವುದನ್ನು ಯಾರೂ ಅಲ್ಲಗಳೆ ಯುವಂತಿಲ್ಲ.

ಏನಿದು ಐಪಿಒ?

ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಎಂದರೆ ಖಾಸಗಿ ಕಂಪನಿಯೊಂದು ಮೊದಲ ಬಾರಿಗೆ ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಪ್ರಕ್ರಿಯೆ. ಇದು ಕಂಪನಿಯ ಕಾರ್ಯಚಟುವಟಿಕೆಗಾಗಿ ಸಾರ್ವಜನಿಕರಿಂದ ಹೊಸ ಮೂಲಧನ ಸಂಗ್ರಹಿಸಲು ಅವಕಾಶ ನೀಡುತ್ತದೆ. ಭಾರತದಲ್ಲಿ ಐಪಿಒಗಳು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ), ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಮೂಲಕ ನಡೆಯುತ್ತವೆ. ಐಪಿಒ ಪ್ರಕ್ರಿಯೆ ಸಾಮಾನ್ಯವಾಗಿ ಸೆಕ್ಯುರಿಟೀಸ್ ಆಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅನುಮೋದನೆಯೊಂದಿಗೆ ಆರಂಭವಾಗುತ್ತದೆ. 

ಕಂಪನಿಯು ತನ್ನ ಆರ್ಥಿಕ ಸ್ಥಿತಿ, ರಿಸ್ಕ್​ಗಳು ಮತ್ತು ಬಳಕೆಯ ಉದ್ದೇಶಗಳನ್ನು ವಿವರಿಸುವ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್​ಎಚ್​ಪಿ) ಸಲ್ಲಿಸುತ್ತದೆ. ನಂತರ ಬುಕ್ ಬಿಲ್ಡಿಂಗ್ ಪ್ರಕ್ರಿಯೆಯ ಮೂಲಕ ಬೆಲೆ ನಿಗದಿಪಡಿಸಲಾಗುತ್ತದೆ. ಅಲ್ಲಿ ಹೂಡಿಕೆದಾರರು ಬಿಡ್ ಮಾಡುತ್ತಾರೆ. ನಿರ್ದಿಷ್ಟ ಅವಧಿ ಬಳಿಕ ಐಪಿಒ ಮುಕ್ತಾಯಗೊಳ್ಳುತ್ತದೆ. ನಂತರ ಷೇರುಗಳು ಲಿಸ್ಟಿಂಗ್ ದಿನದಂದು ವ್ಯಾಪಾರಕ್ಕೆ ಬರುತ್ತವೆ. ಇದು ಕಂಪನಿಗೆ ಪಾರದರ್ಶಕತೆ ತಂದರೆ, ಹೂಡಿಕೆದಾರರಿಗೆ ಹಣ ವಿನಿಯೋಗಿಸಲು ಅವಕಾಶ ಲಭ್ಯವಾಗುತ್ತದೆ. ಆದರೆ, ಇದರಲ್ಲಿ ರಿಸ್ಕೂ ಇರುತ್ತದೆ. ಲಿಸ್ಟಿಂಗ್​ನಿಂದ ಲಾಭವೇ ಆಗುತ್ತದೆ ಎಂದೇನಿಲ್ಲ. ನಷ್ಟವೂ ಆಗಬಹುದು. 2025ರಲ್ಲಿ ಕಂಡುಬರುತ್ತಿರುವ ಐಪಿಒ ಉತ್ಸಾಹಕ್ಕೆ ಹಲವು ಕಾರಣಗಳಿವೆ. ಐಪಿಒ ನಿಯಂತ್ರಣಗಳ ಸರಳೀಕರಣದಂತಹ ಸರ್ಕಾರಿ ಸುಧಾರಣೆಗಳು, ಆರ್ಥಿಕ ಬೆಳವಣಿಗೆ, ಕಡಿಮೆ ಬೆಲೆಯ ಬಂಡವಾಳ ಮುಂತಾದವು ಇದರಲ್ಲಿ ಸೇರಿವೆ. ಈ ವಾತಾವರಣವೇ ಭಾರತವನ್ನು ವಿಶ್ವದ ಐಪಿಒ ಹಬ್ ಆಗಿ ಪರಿವರ್ತಿಸಿದೆ.

ಡಿಸೆಂಬರ್​ನಲ್ಲಿ ಸೆಂಚುರಿ ಆಗುತ್ತಾ?

ಡಿಸೆಂಬರ್​ನಲ್ಲಿ 8 ಐಪಿಒಗಳ ಬಿಡುಗಡೆ ನಿಗದಿಯಾಗಿದ್ದು, ಅವುಗಳಿಂದ 35,000-40,000 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ. ಅದರಲ್ಲಿ ಪ್ರಮುಖ ಐಪಿಒಗಳು ಇಂತಿವೆ.

ಮೀಶೋ: 6,000 ಕೋಟಿ ರೂ., ಇ-ಕಾಮರ್ಸ್ ದಿಗ್ಗಜ, ಡಿ. 3ರಂದು ತೆರೆಯುತ್ತದೆ.

ಬೋಟ್: 4,000 ಕೋಟಿ ರೂ., ಆಡಿಯೋ ಉತ್ಪನ್ನಗಳಲ್ಲಿ ಲೀಡರ್.

ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿ: 10,000 ಕೋಟಿ ರೂ., ಅಸೆಟ್ ಮ್ಯಾನೇಜ್​ವೆುಂಟ್​ನಲ್ಲಿ ದೊಡ್ಡದು.

ಕ್ಲೀನ್​ವ್ಯಾಕ್ಸ್ ಎನ್​ವಿರೋ: 2,500 ಕೋಟಿ ರೂ., ನವೀಕರಿಸಬಹುದಾದ ಇಂಧನ ವಲಯ

ಮಿಲ್ಕಿ ಮಿಸ್ಟ್ ಡೇರಿ: 2,035 ಕೋಟಿ ರೂ., ಹೈನುಗಾರಿಕೆ ಕ್ಷೇತ್ರದ ದೊಡ್ಡ ಕಂಪನಿ

ಎಕ್ಸಿಕಾಂ ಟೆಲಿಕಾಂ: 1,500 ಕೋಟಿ ರೂ., ದೂರಸಂಪರ್ಕ ಮೂಲಸೌಕರ್ಯ ಕಂಪನಿ

ಇತರ: ಫ್ರಾ್ಯಕ್ಟಲ್ ಅನಲಿಟಿಕ್ಸ್, ಹೀರೋ ಫಿನ್​ಕಾರ್ಪ್, ಏಕಸ್ ಮುಂತಾದವು.

ಈ ಐಪಿಒಗಳು ಡಿಜಿಟಲ್, ಹಸಿರು ಇಂಧನ ಮತ್ತು ಆರ್ಥಿಕ ಸೇವಾ ಕ್ಷೇತ್ರಗಳನ್ನು ಒಳಗೊಂಡಿವೆ. ಇವುಗಳಿಂದಾಗಿ 2026ರಲ್ಲೂ ಐಪಿಒ ಬೂಮ್ ಇರಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net