RCB vs GT: ಅಹಮದಾಬಾದ್‌ನಲ್ಲಿ ಇಂದು IPL 2026 ಫೈನಲ್ ಪಂದ್ಯ; ಯಾರ ಮುಡಿಗೇರಲಿದೆ ಕಪ್​?

ರಜತ್ ಪಾಟೀದಾರ್ ಮತ್ತು ಶುಭ್​ಮನ್ ಗಿಲ್
ರಜತ್ ಪಾಟೀದಾರ್ ಮತ್ತು ಶುಭ್​ಮನ್ ಗಿಲ್
Published on
RCB vs GT: 2026ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ ಇಂದು(ಮೇ 31) ಅಹಮದಾಬಾದ್‌ನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ತಮ್ಮ ಎರಡನೇ ಪ್ರಶಸ್ತಿಯನ್ನು ಪಡೆಯಲು ಸಿದ್ದವಾಗಿವೆ.
ಕಳೆದ ವರ್ಷ ಐಪಿಎಲ್ ಟ್ರೋಫಿ ತನ್ನದಾಗಿಸಿಕೊಂಡಿದ್ದ ಆರ್‌ಸಿಬಿ, ಇದೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ರೋಮಾಂಚಕ ಫೈನಲ್‌ನಲ್ಲಿ ಆರು ರನ್‌ಗಳಿಂದ ಗೆದ್ದಿತ್ತು. ಈ ವರ್ಷವೂ ಅದೇ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್​ ಐದು ವರ್ಷಗಳಲ್ಲಿ ಇಂದು ತಮ್ಮ ಮೂರನೇ ಫೈನಲ್ ಪಂದ್ಯವನ್ನು ಆಡಲಿದೆ.

ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ಅಕ್ಯೂವೆದರ್ ಪ್ರಕಾರ, ಫೈನಲ್ ಪಂದ್ಯ ನಡಯುತ್ತಿರುವ ಅಹಮದಾಬಾದ್‌ನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ವಾಯುವ್ಯ ಭಾರತದಾದ್ಯಂತ ಧಾರಾಕಾರ ಮಳೆ ಮತ್ತು ಬಿರುಗಾಳಿಯಿಂದಾಗಿ ಗುಜರಾತ್ ತಂಡ ಅಹಮದಾಬಾದ್‌ಗೆ ಆಗಮಿಸುವುದು ವಿಳಂಬವಾಗಿದೆ. ಆದರೂ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸೋ ಸಾಧ್ಯತೆ ಕಡಿಮೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ರೆ ಬಿಸಿಸಿಐ ಫೈನಲ್ ಪಂದ್ಯವನ್ನು ನಾಳೆಗೆ ಮುಂದೂಡಲು ನಿರ್ಧರಿಸಿದೆ.

ಸಂಭಾವ್ಯ ಆಟಗಾರರ ಪಟ್ಟಿ:

ಆರ್‌ಸಿಬಿ: ವಿರಾಟ್ ಕೊಹ್ಲಿ, ಪಡಿಕ್ಕಲ್‌, ರಜತ್‌(ನಾಯಕ), ಸಾಲ್ಟ್‌/ವೆಂಕಟೇಶ್‌, ಜಿತೇಶ್‌, ಶೆಫರ್ಡ್‌, ಡೇವಿಡ್‌, ಕೃನಾಲ್‌, ಭುವನೇಶ್ವರ್‌, ಜೇಕಬ್ ಡಫಿ, ಹೇಜಲ್‌ವುಡ್‌, ರಸಿಕ್‌ ಸಲಾಂ.
ಜಿಟಿ: ಶುಭ್​ಮನ್ ಗಿಲ್‌(ನಾಯಕ), ಸುದರ್ಶನ್‌, ಬಟ್ಲರ್‌, ರಾಹುಲ್‌ ತೆವಾಟಿಯಾ, ನಿಶಾಂತ್‌ ಸಿಂಧು, ವಾಷಿಂಗ್ಟನ್‌, ಜೇಸನ್‌ ಹೋಲ್ಡರ್‌, ರಶೀದ್‌, ಸಿರಾಜ್‌, ಪ್ರಸಿದ್ಧ್‌, ಸಾಯಿ ಕಿಶೋರ್‌, ರಬಾಡ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net