ಕೇವಲ 1 ರೂಪಾಯಿ ಕೊಟ್ಟು ಐಫೋನ್ ಪಡೆಯಿರಿ... ಈ ಮೆಗಾ ಆಫರ್ ಹಿಂದಿದೆ ಒಂದು ಸೀಕ್ರೆಟ್! ಏನದು? IPhone
ಕೇವಲ 1 ರೂಪಾಯಿ ಕೊಟ್ಟು ಐಫೋನ್ ಪಡೆಯಿರಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಶ್ವದ ದುಬಾರಿ ಫೋನ್ಗಳಲ್ಲಿ ಐಫೋನ್ ಯಾವಾಗಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ
ಸೆಲೆಬ್ರಿಟಿಗಳು, ಉದ್ಯಮಿಗಳಿಂದ ಹಿಡಿದು ಇಂದಿನ ಯುವ ಸಮುದಾಯ ಹೆಚ್ಚಾಗಿ ಐಫೋನ್ ಬಳಸುತ್ತಿದೆ
ಹೊಸ ಆವೃತ್ತಿಯ ಐಫೋನ್ ಬಂದರೆ ಅದನ್ನು ಖರೀದಿ ಮಾಡಲು ಜನ ಮುಗಿಬೀಳುತ್ತಾರೆ
ಆದರೆ, ಕೇವಲ 1 ರೂಪಾಯಿಗೆ ಈ ಫೋನ್ ಸಿಗುತ್ತದೆ ಅಂದರೆ, ನೀವು ನಂಬುತ್ತೀರಾ?
IPhone : ವಿಶ್ವದ ದುಬಾರಿ ಫೋನ್ಗಳಲ್ಲಿ ಐಫೋನ್ ಯಾವಾಗಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಐಫೋನ್ ಅನ್ನೋದು ಒಂದು ಬ್ರ್ಯಾಂಡ್. ಈ ಫೋನ್ ಇದ್ದವರನ್ನು ನೋಡುವ ರೀತಿಯೇ ಬೇರೆ. ಸೆಲೆಬ್ರಿಟಿಗಳು, ಉದ್ಯಮಿಗಳಿಂದ ಹಿಡಿದು ಇಂದಿನ ಯುವ ಸಮುದಾಯ ಹೆಚ್ಚಾಗಿ ಐಫೋನ್ ಬಳಸುತ್ತಿದೆ.
ಅಂದಹಾಗೆ, ದಿನದಿಂದ ದಿನಕ್ಕೆ ಐಫೋನ್ ಕ್ರೇಜ್ ಕೂಡ ಜಾಸ್ತಿಯಾಗಿದೆ. ಹೊಸ ಆವೃತ್ತಿಯ ಐಫೋನ್ ಬಂದರೆ ಅದನ್ನು ಖರೀದಿ ಮಾಡಲು ಜನ ಮುಗಿಬೀಳುತ್ತಾರೆ. ಮುಂಗಡವಾಗಿಯೇ ಹಣ ಪಾವತಿ ಮಾಡುತ್ತಾರೆ. ಅಷ್ಟರಮಟ್ಟಿಗೆ ಭಾರತದ ಮಾರುಕಟ್ಟೆಯಲ್ಲಿ ಐಫೋನ್ಗೆ ಬೇಡಿಕೆ ಇದೆ. ಅನೇಕರಿಗೆ ಈ ಫೋನ್ ಖರೀದಿ ಮಾಡಬೇಕೆಂಬ ಆಸೆ ಇದ್ದರು ಕೂಡ ಇದರ ದುಬಾರಿ ಬೆಲೆಯಿಂದಾಗಿ ಖರೀದಿಸಲು ಹಿಂದೇಟು ಹಾಕುತ್ತಾರೆ. ಆದರೆ, ಕೇವಲ 1 ರೂಪಾಯಿಗೆ ಈ ಫೋನ್ ಸಿಗುತ್ತದೆ ಅಂದರೆ, ನೀವು ನಂಬುತ್ತೀರಾ? ಈ ಸ್ಟೋರಿ ಓದಿದರೆ ನಿಮಗೆ ನಂಬಿಕೆ ಬಂದರು ಬರಬಹುದೇನೋ?
ಅಯ್ಯೋ... ಕೇವಲ 1 ರೂಪಾಯಿಗೆ ಐಫೋನಾ? ಇದು ನಿಜಾನಾ? ನೀವು ಸುಳ್ಳು ಹೇಳುತ್ತಿಲ್ಲಾ ತಾನೇ? ಎಂದೆಲ್ಲ ನೀವು ಕೇಳಬಹುದು. ಆದರೆ, 1 ರೂಪಾಯಿಗೆ ಐಫೋನ್ ಖರೀದಿ ಮಾಡಬಹುದು. ಅದು ಹೇಗೆ ಗೊತ್ತಾ? ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ ಈ ಸುದ್ದಿಯನ್ನು ಒಮ್ಮೆ ಓದಿ.
ಅಂದಹಾಗೆ, ಪ್ರಾಚೀನ ವಸ್ತುಗಳಿಗೆ ಒಳ್ಳೆಯ ಬೇಡಿಕೆ ಮತ್ತು ಬೆಲೆ ಇದೆ. ನಾಣ್ಯಗಳು ಸೇರಿದಂತೆ ಈ ಹಿಂದೆ ಬಳಸುತ್ತಿದ್ದ ವಸ್ತುಗಳು ಇಂದು ಬಹುತೇಕ ಕಣ್ಮರೆಯಾಗಿವೆ. ಆದರೆ, ಬೆರಳಣಿಕೆಯಷ್ಟು ವಸ್ತುಗಳು ಇಂದಿಗೂ ಚಲಾವಣೆಯಲ್ಲಿವೆ. ಅಂತಹ ವಸ್ತುಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಅವುಗಳಲ್ಲಿ 1970ರಲ್ಲಿ ಮುದ್ರಿಸಿದ ಒಂದು ರೂಪಾಯಿ ಭಾರತೀಯ ನಾಣ್ಯ ಕೂಡ ಒಂದು.
1970ರಲ್ಲಿ ಮುದ್ರಿಸಿದ 1 ರೂಪಾಯಿ ನಾಣ್ಯಕ್ಕೆ ಉಚಿತ ಐಫೋನ್ ನೀಡುತ್ತೇವೆ ಎಂದು ಆಫರ್ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಭಾರತೀಯ ಕರೆನ್ಸಿಯಲ್ಲಿ ಸುಮಾರು 80,000 ರೂಪಾಯಿ ಮೌಲ್ಯದ ಫೋನ್ ಅನ್ನು ಕೇವಲ ಒಂದು ರೂಪಾಯಿಗೆ ನೀಡುವುದಾಗಿ ಅಂಗಡಿಯೊಬ್ಬ ನೀಡಿದ ಜಾಹೀರಾತಿನಿಂದ ಅನೇಕ ಜನರು ಇದೀಗ7 ಆಶ್ಚರ್ಯಚಕಿತರಾಗಿದ್ದಾರೆ.
1970 ರಲ್ಲಿ ಬಿಡುಗಡೆಯಾದ ಈ ಒಂದು ರೂಪಾಯಿ ನಾಣ್ಯಗಳನ್ನು 'ನಿಕ್ಕಲ್' ಲೋಹದಿಂದ ಮಾಡಲ್ಪಟ್ಟಿದೆ. ಇದೊಂದು ಅಪರೂಪದ ಲೋಹ. ಹೀಗಾಗಿ, ಈ ಸುದ್ದಿ ನಿಜವಾಗುವ ಸಾಧ್ಯತೆಯಿದೆ ಅನ್ನೋದು ಅನೇಕ ನಾಣ್ಯ ಸಂಗ್ರಹಕಾರರು ಅಭಿಪ್ರಾಯವಾಗಿದೆ. ಎರಡನೇ ಮಹಾಯುದ್ಧದ ನಂತರ ಉಂಟಾದ ನಿಕ್ಕಲ್ ಕೊರತೆಯಿಂದಾಗಿ, ಈ ಲೋಹದ ಬೆಲೆ ಐದು ಪಟ್ಟು ಹೆಚ್ಚಾಯಿತು. ಹೀಗಾಗಿ, ನಿಕ್ಕಲ್ನಲ್ಲಿ ನಾಣ್ಯಗಳ ಮುದ್ರಿಸುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು.
ಭಾರತದಾದ್ಯಂತ ಪ್ರಸ್ತುತ ಮೂರು ಸಾವಿರಕ್ಕಿಂತ ಕಡಿಮೆ ನಾಣ್ಯಗಳು ಚಲಾವಣೆಯಲ್ಲಿವೆ ಎಂದು ಹೇಳಲಾಗುತ್ತದೆ. ಆದರೆ, ಹೆಚ್ಚಿನ ಜನರು ಅವುಗಳನ್ನು ಸುರಕ್ಷಿತವಾಗಿ ಇಡುವುದಿಲ್ಲ. ಆದರೆ, ಈ ಅಪರೂಪದ ನಾಣ್ಯಗಳನ್ನು ಸಂಗ್ರಹಿಸುವವರು 1970 ರ 1 ರೂಪಾಯಿ ನಾಣ್ಯಕ್ಕಾಗಿ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ನೀಡಲು ಸಿದ್ಧರಿರುತ್ತಾರೆ.
ಆದ್ದರಿಂದ, ನಾವು ಆ ಕರೆನ್ಸಿಯ ಮೌಲ್ಯವನ್ನು ಲೆಕ್ಕ ಹಾಕಿದರೆ, ಐಫೋನ್ ನೀಡುವುದರಿಂದ ಯಾವುದೇ ನಷ್ಟವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದಾಗ್ಯೂ, ಅಂತಹ ಜಾಹೀರಾತುಗಳನ್ನು ನಂಬುವ ಮೊದಲು, ಅವುಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ, (ಏಜೆನ್ಸೀಸ್).