ಒಂದು ಚುನಾವಣಾ ಫಲಿತಾಂಶ ಮಾತ್ರವೇ ಪಾಕ್ ಆಕ್ರಮಿತ ಕಾಶ್ಮೀರದ ಭವಿಷ್ಯ ಅಥವಾ ಭಾರತ-ಪಾಕಿಸ್ತಾನ ಸಂಬಂಧವನ್ನು ನಿರ್ಧರಿಸುವುದಿಲ್ಲ. ಅದಾಗ್ಯೂ ಈ ಚುನಾವಣೆ ಭಾರತಕ್ಕೆ ರಾಜಕೀಯ, ರಾಜತಾಂತ್ರಿಕ ಮತ್ತು ಭದ್ರತಾ ದೃಷ್ಟಿಯಿಂದ ಮಹತ್ವದ್ದಾಗಿದೆ. ಪಿಒಕೆಯಲ್ಲಿ ಪಾಕಿಸ್ತಾನವಿರೋಧಿ ಜನಾಭಿಪ್ರಾಯ ದೊಡ್ಡ ಮಟ್ಟದಲ್ಲಿ ವ್ಯಕ್ತವಾದರೆ, ಚುನಾವಣೆ ವ್ಯಾಪಕ ಪ್ರತಿಭಟನೆಗಳು ಅಥವಾ ರಾಜಕೀಯ ಅಸ್ಥಿರತೆಗೆ ಕಾರಣವಾದರೆ ಅವು ಭಾರತಕ್ಕೆ ನಿರ್ಣಾಯಕವಾಗಿ ಪರಿಣಮಿಸಲಿದ್ದು, ಆ ನಿಟ್ಟಿನಲ್ಲಿ ಪ್ರಮುಖ ಕೆಲವು ಸಂಗತಿಗಳು ಇಂತಿವೆ.