ಅಜಿತ್ ಪವಾರ್ ಬಣಕ್ಕೆ ಪ್ರಶಾಂತ್ ಕಿಶೋರ್ ಸಾಥ್..? ಸುಪ್ರಿಯಾ ಸುಳೆ ಮಹತ್ವದ ಪ್ರತಿಕ್ರಿಯೆ | Supriya Sule

Supriya Sule | ಅಜಿತ್ ಪವಾರ್ ಬಣಕ್ಕೆ ಪ್ರಶಾಂತ್ ಕಿಶೋರ್ ಸಾಥ್..? ಸುಪ್ರಿಯಾ ಸುಳೆ ಮಹತ್ವದ ಪ್ರತಿಕ್ರಿಯೆ
Supriya Sule | ಅಜಿತ್ ಪವಾರ್ ಬಣಕ್ಕೆ ಪ್ರಶಾಂತ್ ಕಿಶೋರ್ ಸಾಥ್..? ಸುಪ್ರಿಯಾ ಸುಳೆ ಮಹತ್ವದ ಪ್ರತಿಕ್ರಿಯೆ
Published on

ದಿ. ಅಜಿತ್ ಪವಾರ್ ನೇತೃತ್ವದ ಬಣವು ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರೊಂದಿಗೆ ಕೆಲಸ ಮಾಡಲು ಬಯಸುತ್ತದೆಯೇ ಎನ್ನುವುದು ಅವರ ಪಕ್ಷದ ಆಂತರಿಕ ವಿಷಯವಾಗಿದೆ ಎಂದು ಶರದ್​ ಬಣದ ಸಂಸದೆ ಸುಪ್ರಿಯಾ ಸುಳೆ ಹೇಳಿಕೆ ನೀಡಿದ್ದಾರೆ.

ಪ್ರಶಾಂತ್ ಕಿಶೋರ್ ತಮ್ಮ ಒಳ್ಳೆಯ ಸ್ನೇಹಿತರಾಗಿದ್ದು, ಅವರು ಇತ್ತೀಚೆಗೆ ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಅತಿ ದೊಡ್ಡ ಹೋರಾಟದಲ್ಲಿ ಗೆದ್ದಿದ್ದಾರೆ ಎಂದರು.

ಪ್ರಶಾಂತ್ ಕಿಶೋರ್ ನನಗೆ ಹಲವು ವರ್ಷಗಳಿಂದ ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರಾಗಿದ್ದಾರೆ. ನಾನು ಅವರ ಕೆಲಸವನ್ನು ಹತ್ತಿರದಿಂದ ಗಮನಿಸಿದ್ದೇನೆ ಮತ್ತು ನಮ್ಮ ಸ್ನೇಹವನ್ನು ಎಂದಿಗೂ ಮುಚ್ಚಿಟ್ಟಿಲ್ಲ, ಆದರೆ ಅವರು ತಮ್ಮ ವೃತ್ತಿಪರ ಸಾಮರ್ಥ್ಯದಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ ಮತ್ತು ಯಾರೊಂದಿಗೆ ಕೆಲಸ ಮಾಡಬೇಕು ಎಂಬುದು ಅವರ ನಿರ್ಧಾರವಾಗಿದೆ ಎಂದು ಅವರು ಹೇಳಿದರು.
ಈ ವಾರದ ಆರಂಭದಲ್ಲಿ ಕಿಶೋರ್ ಎನ್​ಸಿಪಿ ಮುಖ್ಯಸ್ಥೆ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಹಾಗೂ ಅವರ ಪುತ್ರ, ಸಂಸದ ಪಾರ್ಥ್ ಪವಾರ್ ಅವರನ್ನು ಭೇಟಿಯಾಗಿದ್ದರು. ಮತ್ತೊಂದೆಡೆ ಸುಳೆ ಅವರು, ಬಿಜೆಪಿ ಎದುರು ಪ್ರಶಾಂತ್ ಕಿಶೋರ್ ಅವರು ಬಿಹಾರದಲ್ಲಿ ಮಾಡಿದ ರಾಜಕೀಯ ಕೆಲಸವನ್ನು ಶ್ಲಾಘಿಸಿದರು. ಬಿಜೆಪಿಯ ಬಲಿಷ್ಠ ರಾಜಕೀಯ ವ್ಯವಸ್ಥೆಯ ನಡುವೆಯೂ ಅವರು ಬಂಕಿಪುರದಲ್ಲಿ ಅತಿ ದೊಡ್ಡ ಕದನವನ್ನು ಗೆದ್ದಿದ್ದಾರೆ ಎಂದು ಹೇಳಿದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಬೂತ್‌ನಲ್ಲಿಯೂ ಬಿಜೆಪಿ ಕಳಪೆ ಪ್ರದರ್ಶನ ನೀಡಿದೆ ಎಂದು ಅಂಕಿಅಂಶಗಳು ತೋರಿಸಿವೆ ಎಂದು ಅವರು ಹೇಳಿದರು.
ಈ ಸನ್ನಿವೇಶವನ್ನು ಗಮನಿಸಿದಾಗ, ನಾವು ಪ್ರಶಾಂತ್ ಕಿಶೋರ್ ಅವರನ್ನು ಅಭಿನಂದಿಸಬೇಕು. ಅವರು ಶ್ರಮಜೀವಿಯಾಗಿದ್ದು, ಹಲವು ವರ್ಷಗಳಿಂದ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡಿದ್ದಾರೆ, ನಾವು ಸ್ಥಳೀಯ ಮಟ್ಟದಿಂದ ದೆಹಲಿಯವರೆಗೆ ಅಧಿಕಾರದಲ್ಲಿದ್ದು, ಬಾರಾಮತಿಯ ಕಾಟೇವಾಡಿಯಲ್ಲಿರುವ ನಮ್ಮ ಸ್ವಂತ ಬೂತ್‌ನಲ್ಲೇ ನಮಗೆ ನಕಾರಾತ್ಮಕ ಫಲಿತಾಂಶ ಬಂದಿದ್ದರೆ, ನನ್ನಲ್ಲಿ ಏನೋ ಗಂಭೀರ ಲೋಪವಿದೆ ಎಂದು ನನಗೆ ಅನಿಸುತ್ತಿತ್ತು ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್​ ನವೀನ್​ ಅವರ ಬಗ್ಗೆ ವ್ಯಂಗ್ಯವಾಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net