ಗೃಹ ಸಾಲ ಪಡೆಯುವವರಿಗೆ ಸಿಹಿ ಸುದ್ದಿ! ಆರ್​ಬಿಐ ರೆಪೋ ದರ ಕಡಿತ ಬೆನ್ನಲ್ಲೇ ಬಡ್ಡಿದರ ಇಳಿಕೆ

ಗೃಹ ಸಾಲ ಬಡ್ಡಿದರದಲ್ಲಿ ಕಡಿತ
ಗೃಹ ಸಾಲ ಬಡ್ಡಿದರದಲ್ಲಿ ಕಡಿತ
Published on

ಪ್ರಮುಖ ಮುಖ್ಯಾಂಶಗಳು

  • ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದ ಆರ್​ಬಿಐ
  • ರೆಪೊ ದರವನ್ನು ಶೇ.5.25ರಷ್ಟು ಕಡಿತ
  • ಗೃಹ ಸಾಲ ಸೇರಿ ಇನ್ನಿತರ ಸಾಲಗಳ ಬಡ್ಡಿದರಗಳು ಕುಸಿತ
ನವದೆಹಲಿ: ಇಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಪ್ರಮುಖ ಬಡ್ಡಿದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿರುವುದು ಸದ್ಯ ದೇಶದ ಜನತೆಯಲ್ಲಿ ಭಾರೀ ಸಂತಸ ತಂದಿದೆ. ಬಡ್ಡಿದರ ಬದಲಾವಣೆಗಳನ್ನು ಅಳೆಯುವ ಕನಿಷ್ಠ ಮಾನದಂಡವೆಂದರೆ ಬೇಸಿಸ್ ಪಾಯಿಂಟ್‌ಗಳು. ಈ ವಿಷಯವನ್ನು ಗಮನದಲ್ಲಿರಿಸಿಕೊಂಡ ಆರ್‌ಬಿಐ, ರೆಪೊ ದರವನ್ನು ಶೇ.5.25ರಷ್ಟು ಇಳಿಸಿದೆ. ಇದು ಗೃಹ ಸಾಲ ಸೇರಿ ಇನ್ನಿತರ ಸಾಲಗಳನ್ನು ತೆಗೆದುಕೊಳ್ಳುವ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಆರ್​ಬಿಐನ ರೆಪೋ ದರ ಕಡಿತದಿಂದ ಸಾಲದ ಕಂತುಗಳು ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಆರ್‌ಬಿಐನ ಇತ್ತೀಚಿನ ನಿರ್ಧಾರವು ಬ್ಯಾಂಕ್ ಸಾಲಗಳನ್ನು ಪಡೆದವರಿಗೆ ರಿಲೀಫ್​ ನೀಡಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಸೇರಿ ಕೆಲವು ಬ್ಯಾಂಕ್​ಗಳು ಪ್ರಸ್ತುತ ಶೇ.7.35ರಷ್ಟು ಗೃಹ ಸಾಲವನ್ನು ನೀಡುತ್ತಿವೆ. ಈಗ ರೆಪೋ ದರ ಕಡಿತದಿಂದ ಸಾಲ ಪಡೆದವರಿಗೆ ಆ ಬಡ್ಡಿದರವನ್ನು ಶೇ.7.1ರಷ್ಟು ಕಡಿಮೆ ಮಾಡಲಿದೆ.  
ಇದು ಕೆಲವು ಖಾಸಗಿ ಬ್ಯಾಂಕುಗಳು ನೀಡುವ ಠೇವಣಿ ದರವೂ ಆಗಿದೆ. 15 ವರ್ಷಗಳವರೆಗೆ 1 ಕೋಟಿ ರೂ. ಗೃಹ ಸಾಲದ ಮೇಲೆ, ದರದಲ್ಲಿ ಶೇ.0.25ರಷ್ಟು ಕಡಿತವು ತಿಂಗಳಿಗೆ ಸುಮಾರು 1,440 ರೂ.ನಷ್ಟು ಇಎಂಐ ಹಣದಲ್ಲಿ ಕಡಿತ ತರಲಿದೆ. ಈ ರೆಪೋ ದರ ಇಳಿಕೆ ನಂತರದಲ್ಲಿ ಹೊಸ ಸಾಲಗಾರರಿಗೆ ಶೇ.7.1ರಷ್ಟು ಬೆಲೆಗೆ ಗೃಹ ಸಾಲಗಳನ್ನು ನೀಡಲು, ಲೋನ್​ ನೀಡುವವರು ಠೇವಣಿ ದರಗಳನ್ನು ಕಡಿತಗೊಳಿಸಬೇಕಾಗುತ್ತದೆ ಮತ್ತು ರೇಟ್​ ಅನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net