ಕೋಲ್ಕತ್ತಾ ನಿವಾಸಿ ಎಂದು ನಕಲಿ ದಾಖಲೆಗಳೊಂದಿಗೆ ಸಿಕ್ಕಿಬಿದ್ದ ಇಂಡೋನೇಷ್ಯಾ ಮಹಿಳೆ: ಸೋನೌಲಿ ಗಡಿಯಲ್ಲಿ ಬಂಧನ..Indonesian woman

ಕೋಲ್ಕತ್ತಾ ನಿವಾಸಿ ಎಂದು ನಕಲಿ ದಾಖಲೆಗಳೊಂದಿಗೆ ಸಿಕ್ಕಿಬಿದ್ದ ಇಂಡೋನೇಷ್ಯಾ ಮಹಿಳೆ: ಸೋನೌಲಿ ಗಡಿಯಲ್ಲಿ ಬಂಧನ..Indonesian woman
Published on: 
  • ಕೋಲ್ಕತ್ತಾ ನಿವಾಸಿ ಎಂದು ಭಾರತೀಯ ನಕಲಿ ಗುರುತಿನ ಚೀಟಿ ಹೊಂದಿದ್ದ ಮಹಿಳೆ ವಶಕ್ಕೆ.

  • ಹಿಂದಿ ಮಾತನಾಡಲು ಪರದಾಡಿದ ಸೋನೌಲಿ ಗಡಿಯಲ್ಲಿ ಇಂಡೋನೇಷಿಯಾದ ಮಹಿಳೆ ಬಂಧನ.

  • ನಕಲಿ ಪಾನ್​ ಕಾರ್ಡ್ ಸೇರಿದಂತೆ..ಹಲವು ಭಾರತೀಯ ನಕಲಿ ದಾಖಲೆ ಪತ್ತೆ.

ಕೋಲ್ಕತ್ತಾ ನಿವಾಸಿ ಎಂದು ಹೇಳಿಕೊಂಡು, ಭಾರತೀಯ ನಕಲಿ ಗುರುತಿನ ಚೀಟಿ ಹೊಂದಿದ್ದು, ಚೀನಾಕ್ಕೆ ಪ್ರಯಾಣಿಸುವ ಬೌದ್ಧ ಸನ್ಯಾಸಿಗಳಿಗೆ ಸಹಾಯ ಮಾಡುವ ಎನ್​ಜಿಒದ ಅಧ್ಯಕ್ಷೆ ಎಂದು ಸುಳ್ಳು ಹೇಳಿದ್ದ ಇಂಡೋನೇಷ್ಯಾದ ಮಹಿಳೆ ಮಹಾರಾಜ್‌ಗಂಜ್ ಜಿಲ್ಲೆಯ ಸೋನೌಲಿ ಗಡಿಯಲ್ಲಿ ವಲಸೆ ಕಚೇರಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಹಿಂದಿ ಮಾತನಾಡಲು ತಡವರಿಸಿದ್ದೇ ಸಂಶಯಕ್ಕೆ ಕಾರಣವಾಗಿ..ಅಸಲಿ ಸತ್ಯ ಬಾಯ್ಬಿಡುವಂತೆ ಸಹಾಯ ಮಾಡಿತು.

ರೋಹನಾ ಎಂಬ ಹೆಸರಿನ ಈ ಮಹಿಳೆಯು ನ.10ರಂದು ಈಕೆ ನೇಪಾಳಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾಗ, ತಡೆದು ನಿಲ್ಲಿಸಲಾಗಿತ್ತು. ಈಕೆ ಭಾರತೀಯ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ವಿಭಿನ್ನ ಹೆಸರುಗಳು ಹಾಗೂ ವಿಭಿನ್ನ ಜನ್ಮ ದಿನಾಂಕಗಳನ್ನು ಹೊಂದಿರುವ ಎರಡು ಪ್ಯಾನ್​ ಕಾರ್ಡ್​ಗಳನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ, ಸದ್ಯ ಈಕೆಗೆ ನಿಜಕ್ಕೂ ಕೋಲ್ಕತ್ತಾ ಮೂಲದ ಎನ್‌ಜಿಒ ಜೊತೆಗೆ ನಂಟಿದೆಯೇ ಎನ್ನುವುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಹಿಂದಿ ಮಾತನಾಡಲು ಪರದಾಟ

ಸೋನೌಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ನವೆಂಬರ್ 10 ರಂದು ರಾತ್ರಿ 7.30ಕ್ಕೆ ಸೋನೌಲಿ ವಲಸೆ ಕಚೇರಿಗೆ ಆಗಮಿಸಿದ ಆಕೆ ZJJ2157469 ಸಂಖ್ಯೆಯ ಭಾರತೀಯ ಮತದಾರರ ಗುರುತಿನ ಚೀಟಿಯನ್ನು ಪ್ರದರ್ಶಿಸಿದ್ದಳು. ಕೋಲ್ಕತ್ತಾದಲ್ಲಿರುವ ಹೊಸ ಟಂಗ್ರಾ ರಸ್ತೆಯ ನಿವಾಸಿ ಎಂದು ರೋಹನಾ ಹೇಳಿಕೊಂಡಿದ್ದಾರೆ.

ಆ ದಾಖಲೆಯಲ್ಲಿ ಆಕೆಯನ್ನು ಜೂನ್ 29, 1975 ರಂದು ಜನಿಸಿದ ಲಿ ಕಿಮ್ ಲೀನ್ ಎಂದು ನಮೂದಿಸಲಾಗಿದ್ದು, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯ ಹೊಸ ಟಂಗ್ರಾ ರಸ್ತೆಯ ವಿಳಾಸವನ್ನು ನೀಡಲಾಗಿತ್ತು. ಆದರೆ, ವಿಚಾರಣೆ ನಡೆಸುವ ಸಂದರ್ಭದಲ್ಲಿ ಆಕೆ ಹಿಂದಿ ಮಾತನಾಡಲು ಆಗದೆ, ತಡವರಿಸಿದ್ದಳು. ಇದು ಅಧಿಕಾರಿಗಳಲ್ಲಿ ಸಂದೇಹ ಮೂಡಲು ಕಾರಣವಾಯ್ತು. ಆಕೆಯ ಪಾಸ್‌ಪೋರ್ಟ್ ಅನ್ನು ಪರಿಶೀಲಿಸಿದರು. ಆಗ ಆಕೆಯ ಅಸಲಿ ಬಣ್ಣ ಬೆಳಕಿಗೆ ಬಂತು.

ಉದ್ಯೋಗ ವೀಸಾ ಹೊಂದಿದ್ದ ರೊಹನಾ

ರೊಹನಾ ಭಾರತದ ನಿವಾಸಿಯಲ್ಲ..ಕೋಲ್ಕತ್ತಾದಲ್ಲಿ ಮನೆಯೂ ಇಲ್ಲ. ಆಕೆ 1970 ಅಕ್ಟೋಬರ್ 20ರಂದು ಇಂಡೋನೇಷಿಯದಲ್ಲಿ ಜನಿಸಿದ್ದಾರೆ. ಆಕೆಯ ಬಳಿ ಭಾರತೀಯ ಉದ್ಯೋಗ ವೀಸಾ ಇದೆ ಎನ್ನುವುದು ಪತ್ತೆಯಾಗಿದೆ.

ಸದ್ಯ ವಲಸೆ ಅಧಿಕಾರಿಗಳು ರೊಹನಾ ಯಾರು, ಗೂಢಚಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆಯೇ, ವಲಸೆ ಮತ್ತು ಗುರುತಿನ ದಾಖಲೆಗಳ ಅಪರಾಧಗಳ ಹೊರತಾಗಿ ಬೇರೆ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ

ವಂಚನೆ, ನಕಲಿ ದಾಖಲೆಗಳ ಸೃಷ್ಟಿ ಮತ್ತು ಬಳಕೆ ಹಾಗೂ 2025 ರ ವಲಸೆ ಮತ್ತು ವಿದೇಶಿಗರ ಕಾಯ್ದೆಯ ಸೆಕ್ಷನ್ 22 ಮತ್ತು 23 ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 319(2), 336(3), 338 ಮತ್ತು 340(2) ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, (ಏಜೆನ್ಸೀಸ್).