ಇನ್ನಿಂಗ್ಸ್‌ನ ಮತ್ತೊಂದು ವಿಶೇಷವೆಂದರೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಫಾರ್ಮ್‌ಗೆ ಮರಳಿರುವುದು. ಐಪಿಎಲ್ 2026ರಲ್ಲಿ ಕಳಪೆ ಪ್ರದರ್ಶನ ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವವನ್ನೂ ತ್ಯಜಿಸಿದ್ದ ಪಂತ್ ತೀವ್ರ ಒತ್ತಡದಲ್ಲಿದ್ದರು. ಆದರೆ, ಬಿಳಿ ಉಡುಪಿನಲ್ಲಿ ಹಳೆಯ ಲಯಕ್ಕೆ ಮರಳಿದ ಪಂತ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಕೇವಲ ಮೊದಲ ದಿನವೇ 3 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 50 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ.