10 ಸಾವಿರ ರೂ. ಮೌಲ್ಯದ ವೋಚರ್ ನೀಡಲು ಇಂಡಿಗೋ ನಿರ್ಧಾರ..ಯಾರಿಗೆ ಒಲಿಯಲಿದೆ ಈ ಲಕ್! IndiGo

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಡಿಸೆಂಬರ್ ಮೊದಲ ವಾರದಲ್ಲಿ ಇಂಡಿಗೋ ವಿಮಾನಗಳ (IndiGo) ಸಾಮೂಹಿಕ ರದ್ದತಿಯಿಂದ ಸಂಕಷ್ಟ ಅನುಭವಿಸಿರುವ ಪ್ರಯಾಣಿಕರಿಗೆ 10,000 ರೂ. ಮೌಲ್ಯದ ಪ್ರಯಾಣ ವೋಚರ್‌ಗಳನ್ನು ನೀಡುವುದಾಗಿ ವಿಮಾನಯಾನ ಸಂಸ್ಥೆ ಘೋಷಿಸಿದ್ದು, ಇದು ಪ್ರಯಾಣ ಬಿಕ್ಕಟ್ಟು ಎದುರಿಸಿರುವ ಪ್ರಯಾಣಿಕರಿಗೆ ಈ ಕ್ರಮವು ಪರಿಹಾರ ಮಾರ್ಗವಾಗಿದೆ.
ಇಂಡಿಗೋ ತನ್ನ 'ಕೇರ್ ಆಫ್ ಜೆಸ್ಟರ್' ಉಪಕ್ರಮದ ಭಾಗವಾಗಿ ಈ ಹೊಸ ಹೆಜ್ಜೆಯನ್ನು ಇಟ್ಟಿದ್ದು, ಸಾವಿರಾರು ಪ್ರಯಾಣಿಕರಿಗೆ ಪರಿಹಾರ ನೀಡುವ ನಿರೀಕ್ಷೆಯನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಇಂಡಿಗೊ ಈಗ ಏನನ್ನು ಘೋಷಿಸುತ್ತಿದೆ?

ಡಿಸೆಂಬರ್ 3 ರಿಂದ ಡಿಸೆಂಬರ್ 5 ರವರೆಗೆ ನಡೆದ ವಿಮಾನಗಳ ಸಾಮೂಹಿಕ ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗಾಗಿ ಇಂಡಿಗೋ 10 ಸಾವಿರ ರೂ.ಗಳ ವೋಚರ್​ ಕಾರ್ಯಕ್ರಮಗಳನ್ನು ವಿಸ್ತರಿಸಿದೆ. ಇದು ತೀವ್ರ ಅಡಚಣೆ ಮತ್ತು ದೀರ್ಘಕಾಲದ ತೊಂದರೆ ಅನುಭವಿಸಿದ ಗ್ರಾಹಕರಿಗೆ ನೆರವು ನೀಡುವ ಯೋಜನೆಯಾಗಿದೆ ಎಂದು ತನ್ನ ಎಕ್ಸ್​​ ಖಾತೆಯಲ್ಲಿ ಬರೆದು ಪೋಸ್ಟ್​ ಮಾಡಿದೆ.

ಈ ವೋಚರ್‌ಗೆ ಯಾರು ಅರ್ಹರು?

* ಆ ದಿನಗಳಲ್ಲಿ ಯಾವ ವಿಮಾನದಲ್ಲಿ ಪ್ರಯಾಣ ತೀವ್ರ ಅಸ್ತವ್ಯಸ್ತಗೊಂಡಿದೆ ಅವರಿಗೆ ನೆರವು ಸಿಗಲಿದೆ.
*ಡಿಸೆಂಬರ್ 3 ರ ಮಧ್ಯಾಹ್ನ ಮತ್ತು ಡಿಸೆಂಬರ್ 5 ರ ಅಂತ್ಯದ ನಡುವೆ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡ ಜನರಿಗೆ ನೆರವು ಸಿಗಲಿದೆ.
ಈ ವೋಚರ್​ ತಡವಾದ ಅಥವಾ ರದ್ದಾದ ಪ್ರತಿಯೊಂದು ಬುಕಿಂಗ್​ಗೂ ಅರ್ಹವಾಗುವುದಿಲ್ಲ. ಅರ್ಹತೆಯು ವಿಮಾನ ಸಂಸ್ಥೆಯ ಅಡಚಣೆಗೆ ಮಾತ್ರ ಅವಲಂಬಿಸಿರುತ್ತದೆ.

ಪ್ರಯಾಣಿಕರಿಗೆ ವೋಚರ್‌ಗಳು ಯಾವಾಗ ಸಿಗುತ್ತವೆ?

* ಇಂಡಿಗೋ ಡಿಸೆಂಬರ್ 26 ರಿಂದ ಅರ್ಹ ಗ್ರಾಹಕರನ್ನು ತಲುಪಲು ಪ್ರಾರಂಭಿಸಲಿದೆ.
* ವಿಮಾನಯಾನ ಸಂಸ್ಥೆಯಲ್ಲಿ ಈಗಾಗಲೇ ಸಂಪರ್ಕ ವಿವರಗಳು ಇರುವಂತಹ ಪ್ರಯಾಣಿಕರನ್ನು ನೇರವಾಗಿ ಸಂಪರ್ಕಿಸಲಾಗುತ್ತದೆ.

ಟ್ರಾವೆಲ್ ಏಜೆಂಟ್ ಅಥವಾ ಅಪ್ಲಿಕೇಶನ್ ಮೂಲಕ ಟಿಕೆಟ್​ ಬುಕ್ ಮಾಡಿದ್ದರೆ ಏನಾಗುತ್ತದೆ?

ಟ್ರಾವೆಲ್​ ಏಜೆಂಟ್​ಗಳ ಮೂಲಕ ಬುಕಿಂಗ್​ ಮಾಡಿದ ಪ್ರಯಾಣಿಕರ ವಿವರಗಳನ್ನು ಪಡೆಯಲು ಸಂಸ್ಥೆ ಸಮನ್ವಯ ಸಾಧಿಸುತ್ತಿದೆ. ಟಿಕೆಟ್​ ಸ್ವೀಕರಿಸಿದ ನಂತರ ಸಂಸ್ಥೆಯು ನೇರವಾಗಿ ಪ್ರಯಾಣಿಕರನ್ನು ಸಂಪರ್ಕಿಸಿ 10 ಸಾವಿರ ರೂಗಳ ವೋಚರ್​ ನೀಡುವುದಾಗಿ ತಿಳಿಸಿದ್ದಾರೆ.

ಸಂಸ್ಥೆಯು ಪ್ರಯಾಣಿಕರನ್ನು ಸಂಪರ್ಕಿಸದಿದ್ದರೆ ಏನು ಮಾಡಬೇಕು?

ಜನವರಿ 1 ರಿಂದ ಇಂಡಿಗೋ ಮೀಸಲಾದ ವೆಬ್‌ಪುಟವು ಲೈವ್ ಆಗಲಿದ್ದು, ಅಲ್ಲಿ ತಾವು ಅರ್ಹರು ಎಂದು ನಂಬುವ ಪ್ರಯಾಣಿಕರು ಸಂಪೂರ್ಣ ವಿವರಗಳನ್ನು ಈ ಪೋರ್ಟಲ್​ ಮೂಲಕ ಪರಿಶೀಲನೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.

ವೋಚರ್ ಅನ್ನು ಹೇಗೆ ಬಳಸಬಹುದು?

ಡಿಸೆಂಬರ್ 11 ರಂದು ಮೊದಲೇ ಘೋಷಿಸಿದಂತೆ, 10 ಸಾವಿರ ರೂ.ಗಳ ವೋಚರ್ ಅನ್ನು ಮುಂದಿನ ಇಂಡಿಗೂ ಪ್ರಯಾಣಕ್ಕೆ ಬಳಸಬಹುದು. ಹಾಗೆಯೇ ಈ ಅರ್ಹತೆಯು ವಿತರಣೆಯ ದಿನಾಂಕದಿಂದ 12 ತಿಂಗಳವರೆಗೆ ಮಾನ್ಯವಾಗಿರುತ್ತದೆ.

ಇಂಡಿಗೊ ವಿಮಾನಗಳನ್ನು ರದ್ದುಗೊಳಿಸಲು ಕಾರಣವೇನು?

ಇಂಡಿಗೋ ವಿಮಾನಗಳ ಸಾಮೂಹಿಕ ರದ್ದತಿಗೆ ಮುಖ್ಯ ಕಾರಣಗಳೆಂದರೆ DGCAಯ ನವೆಂಬರ್ 2025ರಿಂದ ಜಾರಿಯಾದ ಹೊಸ FDTL ನಿಯಮಗಳು. ಹಾಗೆಯೇ ಪೈಲಟ್‌ಗಳ ವಾರದ ವಿಶ್ರಾಂತಿ 48 ಗಂಟೆಗಳಿಗೆ ಹೆಚ್ಚಿಳ, ರಾತ್ರಿ ಲ್ಯಾಂಡಿಂಗ್‌ಗಳನ್ನು ಮಿತಿಗೊಳಪಡಿಸಿದ್ದರಿಂದ ಪೈಲಟ್ ಕೊರತೆ ಉಂಟಾಯಿತು. ಆದಾಗ್ಯೂ, ಕಂಪನಿಯು ಸಾಕಷ್ಟು ಪೈಲಟ್‌ಗಳನ್ನು ನೇಮಿಸದೇ, ರೋಸ್ಟರಿಂಗ್ ಸಮಸ್ಯೆಗಳು ತೀವ್ರಗೊಂಡಿತು

ಇಂಡಿಗೊ ಪ್ರಯಾಣಿಕರಿಗೆ ತಿಳಿಸಿದ್ದೇನು?

ವಿಮಾನಯಾನ ಸಂಸ್ಥೆಯು ತನ್ನ ತಂಡಗಳು ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ದೂರುಗಳನ್ನು ಪರಿಹರಿಸುವಂತಹ ಕೆಲಸವನ್ನು ಮಾಡುತ್ತಿದೆ. ಹಾಗೆಯೇ ಸಂಪರ್ಕ ಮತ್ತು ಪರಿಶೀಲನೆ ನಡೆಯುತ್ತಿರುವಂತಹ ಸಂದರ್ಭದಲ್ಲಿ ಪ್ರಯಾಣಿಕರು ತುಂಬಾ ತಾಳ್ಮೆಯಿಂದ ವರ್ತಿಸಬೇಕು ಎಂದು ಹೇಳಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net