IndiGo ಬಿಕ್ಕಟ್ಟು ಶಮನ! ವಾಪಸ್ ಟೇಕಾಫ್​ಗೆ ರೆಡಿ: ಕಾರ್ಯಾಚರಣೆ ಸ್ಥಿರ ಎಂದ CEO ಪೀಟರ್ ಎಲ್ಬರ್ಸ್

IndiGo
IndiGo
Published on

ಪ್ರಮುಖ ಮುಖ್ಯಾಂಶಗಳು

  • ಬಿಕ್ಕಟ್ಟಿನ ಬಳಿಕ ಇಂಡಿಗೋ ಚೇತರಿಕೆ
  • ಮತ್ತೆ ಟೇಕಾಫ್​ಗೆ ಸಿದ್ಧ ಎಂದ ಸಿಇಒ ಪೀಟರ್​
ನವದೆಹಲಿ: ಇಂಡಿಯಾದ ಅತಿದೊಡ್ಡ ಖಾಸಗಿ ವಿಮಾನಯಾನ ಕಂಪನಿಯಾದ ಇಂಡಿಗೋ, ಕಳೆದ ಒಂದು ವಾರದಿಂದ ನಡೆಯುತ್ತಿದ್ದ ವ್ಯಾಪಕ ರದ್ದತಿ ಮತ್ತು ವಿಳಂಬಗಳ ನಂತರ, ಇದೀಗ ಮತ್ತೆ ಚೇತರಿಕೆ ಕಾಣುತ್ತಿದ್ದು, ಕಾರ್ಯಚರಣೆ ಸ್ಥಿರವಾಗಿದೆ ಎಂದು ಸಿಇಒ ಪೀಟರ್ ಎಲ್ಬರ್ಸ್ ತಿಳಿಸಿದ್ದಾರೆ.
ಇಂದು ಬಿಡುಗಡೆಯಾದ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಅವರು, "ಇಂಡಿಗೋ ಮತ್ತೆ ತನ್ನ ಹೆಜ್ಜೆ ಇಡುತ್ತಿದೆ, ನಮ್ಮ ಕಾರ್ಯಾಚರಣೆಗಳು ಸ್ಥಿರವಾಗಿವೆ" ಎಂದು ಅವರು ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರ ಬ್ಯಾಗ್​ಗಳನ್ನು ಹಿಂತಿರುಗಿಸಲಾಗಿದೆ. ನಿನ್ನೆಯಿಂದ, ನಮ್ಮ ನೆಟ್‌ವರ್ಕ್‌ನಲ್ಲಿರುವ ನಮ್ಮ ಎಲ್ಲಾ 138 ತಾಣಗಳಿಗೆ ನಾವು ಹಾರಾಟಕ್ಕೆ ಮರಳಿದ್ದೇವೆ. ನಾವು ಸರ್ಕಾರದೊಂದಿಗೆ ಸಂಪೂರ್ಣ ಸಹಕಾರದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಇದಕ್ಕೆ ಕಾರಣವೇನು, ಕಲಿಯಬೇಕಾದ ಪಾಠಗಳು ಮತ್ತು ಹೇಗೆ ಬಲವಾಗಿ ಹೊರಹೊಮ್ಮುವುದು ಎಂಬುದರ ಕುರಿತು ನಾವು ಆಂತರಿಕವಾಗಿ ಗಮನಹರಿಸಲು ಪ್ರಾರಂಭಿಸಿದ್ದೇವೆ" ಎಂದು ಎಲ್ಬರ್ಸ್ ಹೇಳಿದ್ದಾರೆ.

ಘಟನೆ ಆಗಿದ್ದೇನು..?

ಸಂಕಷ್ಟದ ಕಾರಣಗಳು: ಕಳೆದ ಕೆಲವು ದಿನಗಳಲ್ಲಿ, ತಂತ್ರಜ್ಞಾನದ ಸಣ್ಣ ತೊಂದರೆಗಳು, ಕೆಟ್ಟ ಹವಾಮಾನ, ವಿಮಾನ ನಿಲ್ದಾಣಗಳ ರದ್ಧತಿ, ಮತ್ತು ಹೊಸ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟ್ (FDTL) ನಿಯಮಗಳು ಸೇರಿ, ಒಟ್ಟು 2,200 ದೈನಂದಿನ ವಿಮಾನಗಳಲ್ಲಿ 400ಕ್ಕೂ ಹೆಚ್ಚು ರದ್ದಾಗಿವೆ. ಇದರಿಂದ ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಗೊಂದಲ ಸೃಷ್ಟಿಯಾಯಿತು.
ಪರಿಣಾಮ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದರು. ಇಂಡಿಗೋ ತನ್ನ 19.7% ಆನ್-ಟೈಮ್ ಪರ್ಫಾರ್ಮೆನ್ಸ್‌ಗೆ ತಲುಪಲಿಲ್ಲ. ಡಿಜಿಸಿಎ (DGCA) ಇಂಡಿಗೋಗೆ ಶೋ-ಕಾಜ್ ನೋಟಿಸ್ ಜಾರಿ ಮಾಡಿ, ಸಿಇಒ ಮತ್ತು COO ಅವರನ್ನು ವಿಚಾರಣೆಗೆ ಕರೆಸಿತು. ಈಗಾಗಲೇ ಲಕ್ಷಾಂತರ ಯಾತ್ರಿಗಳಿಗೆ ಪೂರ್ಣ ಹಣ ಮರಳಿ ನೀಡಲಾಗಿದ್ದು, ಇದು ದೈನಂದಿನವಾಗಿ ಮುಂದುವರಿದಿದೆ. ರದ್ದಾದ ಬ್ಯಾಗ್‌ಗಳು ಮರಳಿ ನೀಡಲಾಗುತ್ತಿದ್ದು, ಪ್ರಯಾಣಿಕರಿಗೆ ಸ್ವಯಂಚಾಲಿತ ಕಂಪೆನ್ಸೇಷನ್ ನೀಡುವುದು ಕಡ್ಡಾಯವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net