ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ, ಕ್ಷೇತ್ರ ಪುನರ್ ವಿಂಗಡಣೆಗೆ ಸರ್ಕಾರದ ಪ್ರಸ್ತಾವನೆಗಳನ್ನು ಚರ್ಚಿಸಲು ಸರ್ವಪಕ್ಷ ಸಭೆಯನ್ನು ಕರೆಯುವಂತೆ ವಿನಂತಿಸಿ ನಾನು ನಿಮಗೆ ಕೊನೆಯದಾಗಿ ಜುಲೈ 16, 2026 ರಂದು ಪತ್ರ ಬರೆದಿದ್ದೆ. ವಿಶೇಷ ಅಧಿವೇಶನದಲ್ಲಿ ನೀವು ಪರಿಗಣಿಸುತ್ತಿರುವ ಪ್ರಸ್ತಾವನೆಗಳನ್ನು ಪರಿಚಯಿಸುವ ಮೊದಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಸ್ತಾವನೆಗಳನ್ನು ವಿವರವಾಗಿ ಅಧ್ಯಯನ ಮಾಡಲು ಸಾಕಷ್ಟು ಸಮಯವನ್ನು ನೀಡುವಂತೆ ನಾನು ನಿಮ್ಮನ್ನು ವಿನಂತಿಸಿದ್ದೆ ಎಂಬುದನ್ನು ನೆನಪಿಸಿದ್ದಾರೆ.
ಅಲ್ಲದೇ, ಲೋಕಸಭೆಯಲ್ಲಿ ರಾಜ್ಯವಾರು ಸಂಖ್ಯಾಬಲವನ್ನು ಇನ್ನೂ 25 ವರ್ಷಗಳ ಕಾಲ ಇದೇ ರೀತಿ ಕಾಯ್ದುಕೊಳ್ಳಬೇಕು ಮತ್ತು 2029ರ ಲೋಕಸಭಾ ಚುನಾವಣೆಯಿಂದ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.
ಸರ್ಕಾರವು ಸರ್ವಪಕ್ಷ ಸಭೆಯನ್ನು ಕರೆದು ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಸ್ತಾವನೆಗಳನ್ನು ಪರಿಶೀಲಿಸಲು ಸಾಕಷ್ಟು ಸಮಯ ನೀಡಬೇಕು. ಇದು ದೇಶಕ್ಕೆ ಅಗಾಧ ಮಹತ್ವವನ್ನು ಹೊಂದಿರುವ ವಿಷಯವಾಗಿದೆ. ದಯವಿಟ್ಟು ನೀವು ಏಪ್ರಿಲ್ 16 ಮತ್ತು 17, 2026 ರಂದು ಪ್ರಯತ್ನಿಸಿದಂತೆ ಮತ್ತೆ ಬುಲ್ಡೋಜರ್ ಮಾಡಲು ಪ್ರಯತ್ನಿಸಬೇಡಿ ಎಂದು ಕೋರಿದ್ದಾರೆ (ಏಜೆನ್ಸೀಸ್).