ವಾಸಿಂಗ್ಟನ್: ಉತ್ತಮ ಜೀವನ ಮತ್ತು ಅವಕಾಶಗಳಿಗಾಗಿ ಅನೇಕ ಭಾರತೀಯರು ಹೊರ ದೇಶಗಳಲ್ಲಿ ನೆಲೆಸುವ ಕನಸನ್ನು ಕಾಣುತ್ತಾರೆ. ಆದರೆ, ಅಲ್ಲಿನ ಸಾಂಸ್ಕೃತಿಕ ಭಿನ್ನತೆಗಳು ಹಾಗೂ ಪ್ರತ್ಯೇಕತೆಗಳಿಗೆ ರೋಸಿಹೋಗಿರುತ್ತಾರೆ. ಅಂದಹಾಗೇ, ಭಾರತೀಯ ಮೂಲದ ಡಿಜಿಟಲ್ ಸೃಷ್ಟಿಕರ್ತ ಸಚಿನ್ ಸುಂಧು ಅಮೆರಿಕದಲ್ಲಿ ವಾಸಿಸುತ್ತಿದ್ದು, ಈ ವೇಳೆ ಅಲ್ಲೇ ಪಕ್ಕದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಹಿರಿಯ ವ್ಯಕ್ತಿಯೊಬ್ಬರು ನಿಧನರಾದ ನಂತರ ನಡೆದಂತಹ ದುಃಖಕರವಾದ ವಾಸ್ತವಗಳ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.