ಹೂಡಿಕೆ ತಜ್ಞರ ಪ್ರಕಾರ, ಎಲ್ಟಿಸಿಜಿ ತೆರಿಗೆಯ ಹೆಚ್ಚಳವು ವಿದೇಶಿ ಹೂಡಿಕೆದಾರರು ಭಾರತದಿಂದ ಹೊರಹೋಗಲು ಪ್ರಮುಖ ಕಾರಣವಾಗಿದೆ. ಆಟಮ್ ಫೈನಾನ್ಷಿಯಲ್ ಸರ್ವಿಸಸ್ನ ಗ್ರೂಪ್ ಸಿಇಒ ಹರ್ಷವರ್ಧನ ವಿಎಂ ಪ್ರಕಾರ, 2025 ರ 12 ತಿಂಗಳುಗಳಲ್ಲಿ 8 ತಿಂಗಳು ವಿದೇಶಿ ಹೂಡಿಕೆದಾರರು ಭಾರತದಿಂದ ಹೂಡಿಕೆಯನ್ನು ವಾಪಸ್ ಪಡೆದಿದ್ದು, ಒಟ್ಟು 1,66,286 ಕೋಟಿ ರೂಪಾಯಿ ಹೊರಹೋಗಿದೆ. ಹಾಗೆಯೇ 2026 ರ ಜನವರಿಯಲ್ಲೇ ಅತಿ ಹೆಚ್ಚು ಅಂದರೆ 33,598 ಕೋಟಿ ರೂಪಾಯಿ ವಾಪಸ್ ಹೋಗಿದೆ.