ಇದಕ್ಕೂ ಮುನ್ನ ಭಾರತ ತಂಡವು ಹರ್ಮನ್‌ಪ್ರೀತ್ ಕೌರ್ ಅವರ ಆಕರ್ಷಕ ಅರ್ಧಶತಕ ಹಾಗೂ ಸ್ಮೃತಿ ಮಂಧಾನ (38) ಮತ್ತು ಶಫಾಲಿ ವರ್ಮಾ (34) ಅವರ ಉಪಯುಕ್ತ ಕಾಣಿಕೆಯಿಂದ 170 ರನ್ ಕಲೆಹಾಕಿತ್ತು. ಆದರೆ, ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್ ಲೋಪದಿಂದಾಗಿ ಬೃಹತ್ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ. ನಾಯಕಿಯ ಅದ್ಭುತ ಹೋರಾಟ ಮೈದಾನದಲ್ಲೇ ಕಣ್ಣೀರಿನೊಂದಿಗೆ ಕೊನೆಗೊಂಡಿತು,(ಏಜೆನ್ಸೀಸ್).