ಈ ಕುರಿತು ಮಾಹಿತಿ ನೀಡಿರುವ ಹೊವಾರ್ಡ್ ಕೌಂಟಿ ಪೊಲೀಸರು, ಶರ್ಮಾ ಜನವರಿ 2 ರಂದು ನಾಪತ್ತೆ ದೂರು ದಾಖಲಿಸಿದ್ದು, ಹೊಸ ವರ್ಷದ ಮುನ್ನಾದಿನದಿಂದ ಗೋಡಿಶಾಲಾ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ಹೇಳಿದ್ದಾನೆ. ಮೇರಿಲ್ಯಾಂಡ್‌ನ ಕೊಲಂಬಿಯಾದ ಟ್ವಿನ್ ರಿವರ್ಸ್ ರಸ್ತೆಯಲ್ಲಿರುವ ತನ್ನ ಫ್ಲಾಟ್‌ನಲ್ಲಿ ಅವಳನ್ನು ಕೊನೆಯ ಬಾರಿಗೆ ನೋಡಿದ್ದಾಗಿ ತಿಳಿಸಿದ್ದಾನೆ. ಆದರೆ ಅರ್ಜುನ್ ದೂರು ನೀಡಿದ ದಿನವೇ ಭಾರತಕ್ಕೆ ತೆರಳಿದ್ದು, ಇದು ಅನುಮಾನಕ್ಕೆ ಬಂದು ಅವರ ಅಪಾರ್ಟ್ಮೆಂಟ್ ಪರಿಶೀಲಿಸಿದಾಗ ನಿಕಿತಾ ಶವ ಪತ್ತೆಯಾಗಿದೆ. ಶವದ ಮೇಲೆ ಗಾಯಗಳಾಗಿದ್ದವು ಎಂದು ತಿಳಿಸಿದ್ದಾರೆ.