ಯುರೋಪ್ ಅಂದುಕೊಂಡಷ್ಟು ಸುಂದರವಲ್ಲ: ಸೌಂದರ್ಯದ ಅಸಲಿ ಕಥೆ ಬಿಚ್ಚಿಟ್ಟ ಭಾರತೀಯ ಪ್ರವಾಸಿ! Indian traveler

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಯುರೋಪ್​ ಪ್ರವಾಸ ಎನ್ನುವುದು ಪ್ರತಿಯೊಬ್ಬ ಭಾರತೀಯನ ಕನಸು. ಆದರೆ, ಕನಸಿನ ಹಾದಿ ಅಂದುಕೊಂಡಷ್ಟು ಸುಲಭವೇನಲ್ಲ
  • ಯುರೋಪ್ "ಕೊಳಕು, ಅಸ್ತವ್ಯಸ್ತ ಮತ್ತು ಕೆಲವೊಮ್ಮೆ ಅಸುರಕ್ಷಿತ" ಎಂದು ಬಣ್ಣಿಸಿದ ಭಾರತೀಯ ಪ್ರವಾಸಿಗ
  • ಪ್ಯಾರಿಸ್ ಮತ್ತು ರೋಮ್‌ನಂತಹ ಸ್ಥಳಗಳಲ್ಲಿ ರಸ್ತೆಬದಿಯಲ್ಲಿ ನೈರ್ಮಲ್ಯದ ಕೊರತೆ ಇದೆ
Indian traveler: ಯುರೋಪ್​ ಪ್ರವಾಸ ಎನ್ನುವುದು ಪ್ರತಿಯೊಬ್ಬ ಭಾರತೀಯನ ಕನಸು. ಆದರೆ, ಕನಸಿನ ಹಾದಿ ಅಂದುಕೊಂಡಷ್ಟು ಸುಲಭವೇನಲ್ಲ ಎಂದು ಭಾರತೀಯ ಪ್ರಯಾಣಿಕರೊಬ್ಬರು ತಮ್ಮ ಇತ್ತೀಚಿನ ಪ್ರವಾಸದ ಅನುಭವವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.
ಪ್ರಯಾಣಿಕ ಅನ್ವೇಶ್ ಸಿಂಗ್​​ ಯುರೋಪ್ ಅನ್ನು "ಕೊಳಕು, ಅಸ್ತವ್ಯಸ್ತ ಮತ್ತು ಕೆಲವೊಮ್ಮೆ ಅಸುರಕ್ಷಿತ" ಎಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿವರಿಸಿದ್ದು, ಇದು ಯುರೋಪ್‌ನ ಪ್ರಸಿದ್ಧ ನಗರಗಳಾದ ಪ್ಯಾರಿಸ್ ಮತ್ತು ರೋಮ್‌ನಂತಹ ಸ್ಥಳಗಳಲ್ಲಿ ರಸ್ತೆಬದಿಯಲ್ಲಿ ಬಿದ್ದಿರುವ ಕಸ ಮತ್ತು ಸ್ವಚ್ಛತೆಯ ಕೊರತೆಯನ್ನು ಅವರು ಎತ್ತಿ ತೋರಿಸಿದೆ.
ವಿಡಿಯೋದಲ್ಲೇನಿದೆ?
ವೀಡಿಯೊದಲ್ಲಿ, ಅನ್ವೇಶ್ ಸಿಂಗ್ ತಮ್ಮ ಪ್ರವಾಸದ ಸಮಯದಲ್ಲಿ ಎದುರಿಸಿದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಅದರಲ್ಲಿ ಕೊಳಕು ಸಾರ್ವಜನಿಕ ಸ್ಥಳಗಳು, ಜನದಟ್ಟಣೆ ಮತ್ತು ಕೆಲವು ಪ್ರದೇಶಗಳಲ್ಲಿನ ಸುರಕ್ಷತಾ ಕಾಳಜಿಗಳ ಬಗ್ಗೆ ಧ್ವನಿ ಎತ್ತಿದ್ದಾರೆ.
ಪೋಸ್ಟ್‌ಕಾರ್ಡ್-ಪರಿಪೂರ್ಣ ಬೀದಿಗಳನ್ನು ಮೀರಿ, ಅನೇಕ ನಗರಗಳಲ್ಲಿ ನಿರ್ಲಕ್ಷ್ಯವು ಗೋಚರಿಸುತ್ತಿದೆ. ಒಂದು ಕಾಲದಲ್ಲಿ ಸ್ವಚ್ಛವಾಗಿದ್ದ ಪ್ರದೇಶಗಳು ಈಗ ನೈರ್ಮಲ್ಯದಿಂದ ಕೂಡಿವೆ. ನೆಲದ ಮೇಲಿನ ವಾಸ್ತವವು ಯಾವಾಗಲೂ ನಾವು ಮಾರಾಟವಾಗುತ್ತಿರುವ ಚಿತ್ರಕ್ಕೆ ಹೊಂದಿಕೆಯಾಗುವುದಿಲ್ಲ. ವಿಶೇಷವಾಗಿ ಹೇಳುವುದಾದರೆ, ಹೊರಗಿನಿಂದ ಬಂದ ಪ್ರಯಾಣಿಕರು ಕೆಲವೊಂದು ನಿಯಮಗಳನ್ನು ಪಾಲಿಸುವುದು ಕಷ್ಟ. ಇದು "ಯುರೋಪ್‌ನ ವಾಸ್ತವತೆ ಎಂದು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಸಿಂಗ್​ ಮತ್ತೊಂದು ಪೋಸ್ಟ್​ನಲ್ಲಿ ನಾನು ಆ ಪ್ರದೇಶದಲ್ಲಿ ಗಮನಿಸಿದ ವಿಚಾರದ ಬಗ್ಗೆ ಮಾತನಾಡಿದ್ದೇನೆ. ಹೊರತು ಯಾವುದೇ ದೇಶವನ್ನು ಅಲ್ಲಗೆಳೆದಿಲ್ಲ. ಅಂದರೆ ಯಾವುದೇ ಹಂತದಲ್ಲಿಯೂ ಇದು ಯುರೋಪ್ vs ಭಾರತ ಅಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಭಾರತವನ್ನು ಪ್ರೀತಿಸುವುದು ಎಂದರೆ ಅದರ ನ್ಯೂನತೆಗಳನ್ನು ನಿರಾಕರಿಸುವುದು ಎಂದಲ್ಲ. ಇತರ ದೇಶಗಳನ್ನು ಮೆಚ್ಚುವುದು ಅಂದರೆ, ಅವುಗಳನ್ನು ಉನ್ನತ ಸ್ಥಾನಕ್ಕೇರಿಸುವುದಲ್ಲ. ನಾವು ಇತರರಿಗೆ ತೋರಿಸುವಂತೆ ನಮ್ಮ ಮನೆ ಬಗ್ಗೆ ಹೇಗೆ ಜವಬ್ದಾರಿಯನ್ನು ಹೊಂದಿರುತ್ತೇವೆಯೋ ಹಾಗೇ ದೇಶದ ಬಗ್ಗೆಯೂ ಅದೇ ರೀತಿ ಪ್ರೀತಿಯನ್ನು ಹೊಂದಿರುತ್ತೇನೆ ಎಂದರು.

ನೆಟ್ಟಿಗರ ಪ್ರತಿಕ್ರಿಯೆ

ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೀಡಾಗಿದ್ದು, ಕೆಲವು ಬಳಕೆದಾರರು ಈ ರೀತಿಯ ಅನುಭವದ ಬಗ್ಗೆ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಈ ವಿಡಿಯೋಕ್ಕೆ ಇತರರು ಅವರ ಅವಲೋಕನಗಳು ಪಕ್ಷಪಾತದಿಂದ ಕೂಡಿವೆ ಎಂದು ವಾದ ಮಾಡಿದ್ದಾರೆ.
ಈ ಪೋಸ್ಟ್​ ವೈರಲ್​ ಆಗುತ್ತಿದ್ದಂತೆಯೇ, ಒಬ್ಬ ಬಳಕೆದಾರರು ನಾವು ಜಪಾನ್‌ನಲ್ಲಿ ತುಂಬಾ ಸುರಕ್ಷಿತವೆಂದು ಭಾವಿಸಿದೆವು. ಅಲ್ಲಿ ಒಳ್ಳೆಯ ಜನರ ಜೊತೆಗೆ ಅತ್ಯಂತ ಸ್ವಚ್ಛವಾಗಿದೆ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ಖಂಡಿತ ನಿಮ್ಮ ಮಾತನ್ನು ಒಪ್ಪುತ್ತೇನೆ ಜಪಾನ್, ಕೊರಿಯಾ, ತೈವಾನ್, ವಿಯೆಟ್ನಾಂ ವಿವಿಧ ಅನುಭವಗಳಿಗೆ ಮತ್ತು ಹಣ ಮತ್ತು ಉತ್ತಮ ಮೌಲ್ಯಕ್ಕಾಗಿ ಪ್ರಯಾಣಿಸಲು 10 ಪಟ್ಟು ಉತ್ತಮವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net