ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುವಾಗ ಊಟ-ತಿಂಡಿಯದ್ದೇ ದೊಡ್ಡ ಚಿಂತೆ. ರೈಲಿನಲ್ಲಿ ಸಿಗುವ ಆಹಾರ ಶುಚಿ-ರುಚಿ ಎರಡು ಇಲ್ಲದಿರುವುದು ಒಂದು ಕಡೆಯಾದರೆ, ಮತ್ತೊಂದು ದುಬಾರಿಯೂ ಆಗಿರುತ್ತದೆ. ಪ್ರಯಾಣಿಕರಿಗೆ ಆಹಾರ ಖರೀದಿಸುವ ವಿಚಾರದಲ್ಲಿ ಇರ ಆತಂಕವನ್ನು ದೂರ ಮಾಡಲು, ಭಾರತದ ಪ್ರಮುಖ ಎಐ-ಆಧಾರಿತ ರೈಲು ಟಿಕೆಟ್ ಬುಕಿಂಗ್ ಪ್ಲಾಟ್ಫಾರ್ಮ್ಗಳಾದ 'ಇಕ್ಸಿಗೋ' ಮತ್ತು 'ಕನ್ಫರ್ಮ್ ಟಿಕೆಟ್', ಜನಪ್ರಿಯ ಫುಡ್ ಡೆಲಿವರಿ ಸಂಸ್ಥೆ(Swiggy food delivery in trains) 'ಸ್ವಿಗ್ಗಿ' ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿವೆ.