ನನ್ನ ರೆಸ್ಯೂಮ್ ನೋಡಲೇ ಇಲ್ಲ! ಅಮೆರಿಕದಲ್ಲಿ ಉದ್ಯೋಗ ಸಿಗದೆ ಕಂಗಾಲಾದ ಭಾರತೀಯ ವಿದ್ಯಾರ್ಥಿಯ ಕಣ್ಣೀರು.. indian student

indian student
indian student
Published on
ಅಮೆರಿಕಾ: (indian student) ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊತ್ತು ಅಮೆರಿಕಾಗೆ ಹೋದ ಭಾರತೀಯ ವಿದ್ಯಾರ್ಥಿಗಳಿಗೆ ಈಗ ಅಲ್ಲಿನ ಉದ್ಯೋಗ ಮಾರುಕಟ್ಟೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಎಫ್-1 (F-1) ವೀಸಾದಲ್ಲಿ ಅಮೆರಿಕಕ್ಕೆ ಹೋದ ಭಾರತೀಯ ವಿದ್ಯಾರ್ಥಿಯೊಬ್ಬರು ತಮಗಾದ ಕಹಿ ಅನುಭವವನ್ನು ಸೋಶಿಯಲ್​​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಯು ರೆಡ್ಡಿಟ್ (Reddit) ವೇದಿಕೆಯಲ್ಲಿ ತನ್ನ ಅಳಲು ತೋಡಿಕೊಂಡಿದ್ದಾರೆ. ನಾನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದೇನೆ. ಅಮೆರಿಕಾದ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದೇನು. ಅಲ್ಲಿನ ಅಧಿಕಾರಿಗಳು ಕೇಳಿದ ಮೊದಲ ಪ್ರಶ್ನೆ ನೀವು ಅಮೆರಿಕದ ಪ್ರಜೆಯೇ?' ಅಥವಾ ನಿಮಗೆ ಕೆಲಸ ಮಾಡಲು ವೀಸಾ ಪ್ರಾಯೋಜಕತ್ವ (Sponsorship) ಬೇಕೇ?' ಎಂಬುದು. ನಾನು ವೀಸಾ ಪ್ರಾಯೋಜಕತ್ವ ಬೇಕು ಎಂದು ಹೇಳಿದ ತಕ್ಷಣ, ಅವರು ನನ್ನ ಅರ್ಹತೆ ಅಥವಾ ಕೌಶಲ್ಯದ ಬಗ್ಗೆ ಕೇಳುವ ಆಸಕ್ತಿ ಕಳೆದುಕೊಂಡರು. ನನ್ನ ರೆಸ್ಯೂಮ್​​ ಕಡೆಗೆ ಕಣ್ಣೆತ್ತಿಯೂ ನೋಡದೆ ನನ್ನನ್ನು ತಿರಸ್ಕರಿಸಿದರು ಎಂದು ಅವರು ಬರೆದುಕೊಂಡಿದ್ದಾರೆ.
ಅವರು ನನ್ನ ಕೆಲಸದ ಅನುಭವ ಅಥವಾ ರೆಸ್ಯೂಮ್​​​ ಅನ್ನು ಒಮ್ಮೆಯೂ ನೋಡಲಿಲ್ಲ. ಕೇವಲ ನಾನು ವಿದೇಶಿ ಪ್ರಜೆ ಎಂಬ ಕಾರಣಕ್ಕೆ ನನ್ನನ್ನು ಕೆಲಸದಿಂದ ದೂರವಿಟ್ಟರು
ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮುಗಿಸಿ ಉದ್ಯೋಗಕ್ಕಾಗಿ ಹುಡುಕುತ್ತಿರುವ ಭಾರತೀಯ ವಿದ್ಯಾರ್ಥಿಯೊಬ್ಬರು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಉದ್ಯೋಗದ ಮಾರುಕಟ್ಟೆಯಲ್ಲಿ ಈಗಿರುವ ಕಠಿಣ ಪರಿಸ್ಥಿತಿ ಮತ್ತು ಪೌರತ್ವದ (Citizenship) ಕುರಿತಾದ ಕಟ್ಟುನಿಟ್ಟಿನ ಪ್ರಶ್ನೆಗಳು ವಿದೇಶಿ ವಿದ್ಯಾರ್ಥಿಗಳಿಗೆ ಹೇಗೆ ಸವಾಲಾಗಿದೆ.
ಸ್ಥಳೀಯರಿಗೆ ಹೆಚ್ಚು ಆದ್ಯತೆ:
ಅಮೆರಿಕದ ಉದ್ಯೋಗ ಮಾರುಕಟ್ಟೆಯಲ್ಲಿ ಈಗ ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ಎಚ್-1ಬಿ (H-1B) ವೀಸಾ ಪ್ರಕ್ರಿಯೆಯ ಸಂಕೀರ್ಣತೆಯಿಂದಾಗಿ ಕಂಪನಿಗಳು ವಿದೇಶಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ.
ಲಕ್ಷಾಂತರ ರೂಪಾಯಿ ಸಾಲ ಮಾಡಿ ಅಮೆರಿಕಕ್ಕೆ ಓದಲು ಹೋದ ಭಾರತೀಯ ವಿದ್ಯಾರ್ಥಿಗಳಿಗೆ, ಪದವಿ ಮುಗಿದ ನಂತರ ಅಲ್ಲಿಯೇ ಕೆಲಸ ಸಿಗದಿದ್ದರೆ ಸಾಲ ತೀರಿಸುವುದು ಮತ್ತು ಅಲ್ಲಿ ನೆಲೆಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net