ಕೋಟಿ ರೂಪಾಯಿ ಪ್ಯಾಕೇಜ್ ಇದ್ದರೂ ಕೈಯಲ್ಲಿ ಕಾಸು ಉಳಿಯಲ್ಲ! ನ್ಯೂಯಾರ್ಕ್ ಜೀವನದ ಅಸಲಿ ಕಥೆ ಬಿಚ್ಚಿಟ್ಟ ಭಾರತೀಯ ಉದ್ಯೋಗಿ..NewYork Life

NewYork Life ಚಿತ್ರ Instagram
NewYork Life ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ವಿದೇಶಕ್ಕೆ ಹೋಗಿ ಕೋಟಿ ಕೋಟಿ ರೂಪಾಯಿ ಪ್ಯಾಕೇಜ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ಬಹುತೇಕರ ಆಸೆ
  • ಅಮೆರಿಕದ ನ್ಯೂಯಾರ್ಕ್‌ನಂತಹ ಜಾಗತಿಕ ನಗರಗಳಲ್ಲಿ ವಾರ್ಷಿಕ 1 ಕೋಟಿ ರೂಪಾಯಿ ಸಂಬಳ ಸಿಕ್ಕರೆ ಇಡೀ ಜೀವನವೇ ಬದಲಾಗಿಬಿಡುತ್ತದೆ ಎಂಬ ನಂಬಿಕೆ
  • ಭಾರತದಲ್ಲಿ ವಾರ್ಷಿಕವಾಗಿ ಸುಮಾರು 25-30 ಲಕ್ಷ ರೂಪಾಯಿಗಳ ಪ್ಯಾಕೇಜ್ ಹೊಂದಿರುವ ವ್ಯಕ್ತಿ ಸಂತೋಷವಾಗಿರುತ್ತಾನೆ
ನ್ಯೂಯಾರ್ಕ್​: ವಿದೇಶಕ್ಕೆ ಹೋಗಿ ಕೋಟಿ ಕೋಟಿ ರೂಪಾಯಿ ಪ್ಯಾಕೇಜ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು, ಐಷಾರಾಮಿ ಜೀವನ ನಡೆಸಬೇಕು ಎನ್ನುವುದು ಇಂದಿನ ಬಹುತೇಕ ಯುವ ಪೀಳಿಗೆಯ ಕನಸು. ವಿಶೇಷವಾಗಿ ಅಮೆರಿಕದ ನ್ಯೂಯಾರ್ಕ್‌ನಂತಹ ಜಾಗತಿಕ ನಗರಗಳಲ್ಲಿ ವಾರ್ಷಿಕ 1 ಕೋಟಿ ರೂಪಾಯಿ ಸಂಬಳ ಸಿಕ್ಕರೆ ಇಡೀ ಜೀವನವೇ ಬದಲಾಗಿಬಿಡುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಅಸಲಿ ಕಥೆಯೇ ಬೇರೆ ಇದೆ! ಅಮೆರಿಕದಲ್ಲಿ (NewYork Life) ನೆಲೆಸಿರುವ ಭಾರತೀಯ ಮೂಲದ ಯಶ್ ಶರ್ಮಾ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕದಂತಹ ದೊಡ್ಡ ದೇಶದಲ್ಲಿ 1 ಕೋಟಿ ಪ್ಯಾಕೇಜ್​ ಹೊಂದಿರುವ ವ್ಯಕ್ತಿಗಿಂತ  ಭಾರತದಲ್ಲಿ ವಾರ್ಷಿಕವಾಗಿ ಸುಮಾರು 25-30 ಲಕ್ಷ ರೂಪಾಯಿಗಳ ಪ್ಯಾಕೇಜ್ ಹೊಂದಿರುವ ವ್ಯಕ್ತಿ ಸಂತೋಷವಾಗಿರುತ್ತಾನೆ ಎಂದು ಅವರು ನಂಬುತ್ತಾರೆ.

ವೈರಲ್​ ವೀಡಿಯೋದಲ್ಲೇನಿದೆ?

ವೈರಲ್​ ವೀಡಿಯೋದಲ್ಲಿ ಮಾತನಾಡಿದ ಯಶ್ ಶರ್ಮಾ, ಒಂದು ಕೋಟಿ ಪ್ಯಾಕೇಜ್ ಕೇಳಿದಾಗ, ಆ ವ್ಯಕ್ತಿ ಅಮೆರಿಕದಿಂದ ನೇರವಾಗಿ ಶ್ರೀಮಂತನಾಗಿ ಹೊರಬರುತ್ತಾನೆ ಎಂದು ತೋರುತ್ತದೆ. ಆದರೆ, ಸತ್ಯವೇ ಬೇರೆ ಆಗಿದೆ. ಏಕೆಂದರೆ ಇಲ್ಲಿ, ಫೆಡರಲ್ ತೆರಿಗೆ, ರಾಜ್ಯ ತೆರಿಗೆ, ನ್ಯೂಯಾರ್ಕ್ ನಗರ ತೆರಿಗೆ, ಸಾಮಾಜಿಕ ಭದ್ರತೆ ಮತ್ತು ಮೆಡಿಕೇರ್ ಎಂದು ಒಂದು ಕೋಟಿ ಪ್ಯಾಕೇಜ್​ನ 30-40 ಪ್ರತಿಶತದಷ್ಟು ತೆರಿಗೆ ಹೋಗುತ್ತದೆ. ಜೊತೆಗೆ ನ್ಯೂಯಾರ್ಕ್ ನಗರದಲ್ಲಿ ವಾಸಿಸಲು ಮನೆ ಬಾಡಿಗೆಗೆ ಪಡೆಯಬೇಕು ಅದು ಸುಮಾರು 2-3 ಲಕ್ಷ ರೂ.ಗಳು ಖರ್ಚಾಗುತ್ತವೆ ಎಂದು ವೀಡಿಯೊದಲ್ಲಿ ತಿಳಿಸಿದ್ದಾರೆ.
ಹಾಗಾಗಿ ಭಾರತದಲ್ಲಿ ಇಪ್ಪತ್ತೈದು ಲಕ್ಷ ರೂಪಾಯಿ ಗಳಿಸುವ ವ್ಯಕ್ತಿ ನ್ಯೂಯಾರ್ಕ್‌ನಲ್ಲಿ ಒಂದು ಕೋಟಿ ರೂಪಾಯಿ ಪ್ಯಾಕೇಜ್ ಹೊಂದಿರುವ ವ್ಯಕ್ತಿಗಿಂತ ಹೆಚ್ಚು ಸಂತೋಷವಾಗಿರುತ್ತಾನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ವೀಡಿಯೊಕ್ಕೆ ನ್ಯೂಯಾರ್ಕ್​ನಲ್ಲಿ 1 ಕೋಟಿ ರೂ. ಪ್ಯಾಕೇಜ್‌ನ ಕರಾಳ ಮುಖ"ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. 

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ

ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ಸಂಪೂರ್ಣ ವಿವರವು ಸಂಬಳದ ಅಂಕಿ ಅಂಶಗಳಿಗೆ ಸಂದರ್ಭದ ಅಗತ್ಯವಿದೆ ಎಂಬುದನ್ನು ಎತ್ತಿ ತೋರಿಸಿತು. ಸ್ಥಳೀಯ ವೆಚ್ಚಗಳನ್ನು ಅಂಶೀಕರಿಸಿದ ನಂತರ ಕಾಗದದ ಮೇಲಿನ ದೊಡ್ಡ ಸಂಖ್ಯೆಯು ಯಾವಾಗಲೂ ಒಂದೇ ರೀತಿಯ ಜೀವನ ಮಟ್ಟಕ್ಕೆ ಅನುವಾದಿಸುವುದಿಲ್ಲ ಎಂದು ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net