ಇರಾನ್ ವಿಧಿಸಿರುವ ದಿಗ್ಬಂಧನದ ನಡುವೆಯೂ ಭಾರತದ ಹಡಗಿಗೆ ಅವಕಾಶ ನೀಡಿದ ಕುರಿತು ಭಾರತಕ್ಕೆ ಇರಾನ್ ರಾಯಭಾರಿ ಮೊಹಮ್ಮದ್ ಫತಲಿ ಮಹತ್ವದ ಹೇಳಿಕೆ ನೀಡಿದ್ದಾರೆ. "ಭಾರತ ಮತ್ತು ಇರಾನ್ ದೀರ್ಘಕಾಲದ ಮಿತ್ರ ರಾಷ್ಟ್ರಗಳು. ಭಾರತೀಯರ ಸಂಕಷ್ಟ ನಮ್ಮ ಸಂಕಷ್ಟವಿದ್ದಂತೆ. ಸಾಮಾನ್ಯ ಹಿತಾಸಕ್ತಿ ಮತ್ತು ಹಂಚಿಕೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಭಾರತಕ್ಕೆ ಹೋಗುವ ಹಡಗುಗಳಿಗೆ ನಾವು ಸುರಕ್ಷಿತ ಹಾದಿ ಒದಗಿಸುತ್ತೇವೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಟ್ಯಾಂಕರ್ ಕೂಡ ಭಾರತದತ್ತ ಪ್ರಯಾಣ ಬೆಳೆಸಲಿದೆ ಎಂದು ತಿಳಿದುಬಂದಿದೆ.