ಎ. ಶ್ರೀಜಾ, ಆರ್. ರತೀಶ್ ಕುಮಾರ್, ಅಜು ಕೆ. ರಾಜು, ಎ. ಎಕ್ಸ್. ತ್ರೇಸಾ, ಆಗಸ್ಟಿನಾ ಮತ್ತು ಎಸ್. ಆನಂದ್ ಅವರು ಜಂಟಿಯಾಗಿ ಬರೆದಿರುವ ಈ ಸಂಶೋಧನಾ ಪ್ರಬಂಧದ ಪ್ರಕಾರ, ಭಾರತದ ನೈಋತ್ಯ ಕರಾವಳಿಯ ಕಾಂಟಿನೆಂಟಲ್ ಇಳಿಜಾರಿನಿಂದ ಇತ್ತೀಚೆಗೆ ಪತ್ತೆಯಾಗುತ್ತಿರುವ ಸಾಲು ಸಾಲು ಆಳ ಸಮುದ್ರದ ಮೀನುಗಳ ಆವಿಷ್ಕಾರವು ಹೊಸ ಬೆಳಕನ್ನು ಚೆಲ್ಲಿದೆ. ಇದು ಪೂರ್ವ ಲಕ್ಷದ್ವೀಪ ಸಮುದ್ರ ಮತ್ತು ಉತ್ತರ ಹಿಂದೂ ಮಹಾಸಾಗರ ಪ್ರದೇಶವು ಮೀನುಗಳ ವೈವಿಧ್ಯತೆಗೆ ಸಂಬಂಧಿಸಿದಂತೆ ಇನ್ನೂ ಪರಿಶೋಧಿಸದ ಅತ್ಯಂತ ಶ್ರೀಮಂತ ವಲಯ ಎಂಬುದನ್ನು ಸಾಬೀತುಪಡಿಸಿದ್ದು, ಈ ಭಾಗದಲ್ಲಿ ಇನ್ನು ಹೆಚ್ಚಿನ ವಿಶೇಷ ಸಂಶೋಧನೆಗಳ ಅಗತ್ಯತೆಯನ್ನು ಒತ್ತಿಹೇಳಿದೆ, (ಏಜೆನ್ಸೀಸ್).