ನವದೆಹಲಿ: ( Indian Army ) ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಇದುವರೆಗೆ ನಾವು ಕೇವಲ ಸೈನಿಕರ ಸಾಹಸ ಮತ್ತು ಯುದ್ಧ ವಿಮಾನಗಳ ಪ್ರದರ್ಶನವನ್ನು ಮಾತ್ರ ನೋಡಿದ್ದೆವು. ಆದರೆ, ಜನವರಿ 26, 2026ರ ಪಥಸಂಚಲನದಲ್ಲಿ ಭಾರತೀಯ ಸೇನೆಯು ದೇಶದ ರಕ್ಷಣೆಯಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ 'ಪ್ರಾಣಿ ದಳ'ವನ್ನು ಮೊದಲ ಬಾರಿಗೆ ಪರಿಚಯಿಸಲಿದೆ. ಸೈನಿಕರಂತೆಯೇ ಅತ್ಯಂತ ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಲಿರುವ ಈ ಮೂಕ ಪ್ರಾಣಿಗಳು ಇಡೀ ಜಗತ್ತಿನ ಗಮನ ಸೆಳೆಯಲು ಸಜ್ಜಾಗಿದ್ದಾರೆ.