ಮತ್ತೊಂದು ಪ್ರಮುಖ ಬದಲಾವಣೆಯಾಗಿ, ರಾಷ್ಟ್ರಪತಿ ಭವನ, ರಾಜ್ ಭವನ ಅಥವಾ ಪ್ರಧಾನಿ ನಿವಾಸಗಳ ಔಪಚಾರಿಕ ಕಾರ್ಯಕ್ರಮಗಳಲ್ಲಿ ಧರಿಸಲಾಗುವ ಮೆಸ್ ಡ್ರೆಸ್ ಸಂಖ್ಯೆ 5 ಮತ್ತು 6 ರಿಂದ ಸಾಂಪ್ರದಾಯಿಕ 'ಪೌಚ್ ಬೆಲ್ಟ್' ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆದರೆ ಆರ್ಮರ್ಡ್ ಕಾರ್ಪ್ಸ್, ಆರ್ಟಿಲರಿ ಸೇರಿದಂತೆ ಕೆಲವು ನಿರ್ದಿಷ್ಟ ರೆಜಿಮೆಂಟ್‌ಗಳ ಕರ್ನಲ್ ಶ್ರೇಣಿಯವರೆಗಿನ ಅಧಿಕಾರಿಗಳಿಗೆ ಮಾತ್ರ ವಿಧ್ಯುಕ್ತ ರೆಜಿಮೆಂಟಲ್ ಕಾರ್ಯಕ್ರಮಗಳಲ್ಲಿ ಇದನ್ನು ಬಳಸಲು ಮುಂದುವರಿದ ಅವಕಾಶವಿದೆ. ಜೊತೆಗೆ, ಎಲ್ಲಾ ಶ್ರೇಣಿಯ ಸಿಬ್ಬಂದಿಗಾಗಿ '3B' ಎಂಬ ಹೊಸ ಚಳಿಗಾಲದ ಉಡುಪನ್ನು ಪರಿಚಯಿಸಲಾಗಿದ್ದು, ಇದು ಬ್ಯಾಟಲ್ ಜಾಕೆಟ್, ಅಂಗೋಲಾ ಶರ್ಟ್ ಮತ್ತು ಬೆರೆಟ್ ಕ್ಯಾಪ್ ಅನ್ನು ಒಳಗೊಂಡಿರುತ್ತದೆ.