ಸತತ ಎರಡನೇ ಬಾರಿ ಮಹಿಳಾ ಕಬಡ್ಡಿ ವಿಶ್ವಕಪ್ ಗೆದ್ದ ಭಾರತ; ಈ ಗೆಲುವು ಮುಂದಿನ ಪೀಳಿಗೆಗೆ ಸ್ಪೂರ್ತಿ ಎಂದ ಪ್ರಧಾನಿ ಮೋದಿ | Kabaddi World Cup

Kabaddi World Cup | ಭಾರತದ ಮಹಿಳಾ ತಂಡ ಕಬಡ್ಡಿ ವಿಶ್ವಕಪ್ ಗೆದ್ದು ಸಂಭ್ರಮಿಸಿದ ಕ್ಷಣ
Kabaddi World Cup | ಭಾರತದ ಮಹಿಳಾ ತಂಡ ಕಬಡ್ಡಿ ವಿಶ್ವಕಪ್ ಗೆದ್ದು ಸಂಭ್ರಮಿಸಿದ ಕ್ಷಣ
Published on
ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್(Kabaddi World Cup) ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯನ್ನು 35–28 ಅಂಕಗಳಿಂದ ಸೋಲಿಸುವ ಮೂಲಕ ಭಾರತ ಮಹಿಳಾ ತಂಡ ಸೋಮವಾರ (ನ.24) ಢಾಕಾದಲ್ಲಿ ಸತತ ಎರಡನೇ ಮಹಿಳಾ ಕಬಡ್ಡಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಲ್ಲದೆ, ಭಾರತ ತಂಡವು ತನ್ನ ಎಲ್ಲಾ ಗುಂಪು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿತ್ತು.
ನಾಕೌಟ್‌ಗಳಲ್ಲಿಯೂ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ ಭಾರತ, ಇರಾನ್ ತಂಡವನ್ನು 33–21ರಿಂದ ಸೋಲಿಸಿ ಫೈನಲ್‌ಗೆ ಸ್ಥಾನ ಲಗ್ಗೆ ಇಟ್ಟಿತು. ಮತ್ತೊಂದೆಡೆ, ಚೈನೀಸ್ ತೈಪೆ ಕೂಡ ಅಜೇಯವಾಗಿ ಸೆಮಿಫೈನಲ್ ಹಣಾಹಣಿಯಲ್ಲಿ ಆತಿಥೇಯ ಬಾಂಗ್ಲಾದೇಶವನ್ನು 25–18ರಿಂದ ಸೋಲಿಸಿ ಫೈನಲ್‌ಗೆ ತಲುಪಿತ್ತು. ಅದರೆ, ಫೈನಲ್ ಪಂದ್ಯದ ಹಣಾಹಣಿಯಲ್ಲಿ ಭಾರತವು ತನ್ನ ಅಮೋಘ ಆಟ ಆಡುವ ಮೂಲಕ ಸತತ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಈ ಬಗ್ಗೆ ಎಕ್ಸ್​ನಲ್ಲಿ ಶುಭಾಶಯ ಕೋರಿದ ಪ್ರಧಾನಿ ನರೇದ್ರ ಮೋದಿ, ಈ ಗೆಲುವು ಭವಿಷ್ಯದ ಪೀಳಿಗೆಗೆ ಕ್ರೀಡೆಯನ್ನು ಕೈಗೆತ್ತಿಕೊಳ್ಳಲು ಸ್ಫೂರ್ತಿ ನೀಡುತ್ತದೆ.
2025ರ ಕಬಡ್ಡಿ ವಿಶ್ವಕಪ್ ಗೆಲ್ಲುವ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ನಮ್ಮ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಅಭಿನಂದನೆಗಳು. ಇವರು ಅತ್ಯುತ್ತಮ ಧೈರ್ಯ, ಕೌಶಲ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ಈ ಗೆಲುವು ಅಸಂಖ್ಯಾತ ಯುವಕರು ಕಬಡ್ಡಿಯನ್ನು ಮುಂದುವರಿಸಲು, ದೊಡ್ಡ ಕನಸು ಕಾಣಲು ಮತ್ತು ಉನ್ನತ ಗುರಿಯನ್ನು ಸಾಧಿಸಲು ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net