ವಿಶ್ವಕಪ್ ವಿಜಯದ ನಂತರ ನಿರೂಪಕರು ಸಿರಾಜ್ ಅವರನ್ನು ಮಾತನಾಡಿಸಿ, "ನಿಮಗೆ ಈ ಗೆಲುವು ಹೇಗನ್ನಿಸುತ್ತಿದೆ?" ಎಂದು ಪ್ರಶ್ನಿಸಿದರು. ಅದಕ್ಕೆ ಅತ್ಯಂತ ವಿನಮ್ರವಾಗಿ ಉತ್ತರಿಸಿದ ಸಿರಾಜ್, "ನಾನು ಈ ಇಡೀ ಟೂರ್ನಮೆಂಟ್ನಲ್ಲಿ ಬೆಂಚ್ ಕಾಯ್ದಿದ್ದೇನೆ, ಆಟಗಾರರಿಗೆ ನೀರು ಹೊತ್ತಿದ್ದೇನೆ ಮತ್ತು ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ್ದೇನೆ. ಈ ಕೆಲಸಗಳೂ ಕೂಡ ತಂಡಕ್ಕೆ ಅಷ್ಟೇ ಮುಖ್ಯ ಎಂದು ನಾನು ನಂಬುತ್ತೇನೆ. ತಂಡ ಈ ರೀತಿ ಗೆಲ್ಲುತ್ತಿದ್ದರೆ, ತೆರೆಯ ಹಿಂದೆ ನಿಂತು ಈ ಕೆಲಸಗಳನ್ನು ಮಾಡಲು ನನಗೆ ಯಾವುದೇ ಸಂಕೋಚವಿಲ್ಲ ಮತ್ತು ನಾನು ತುಂಬಾ ಸಂತೋಷವಾಗಿದ್ದೇನೆ," ಎಂದಿದ್ದಾರೆ.