ಐರ್ಲೆಂಡ್ ಬಳಿಕ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ವಾಷ್​ಔಟ್ ಆದ ಭಾರತ: ಟಿ20 ಕ್ರಿಕೆಟ್​ನಲ್ಲಿ ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್ | IND vs ENG

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
IND vs ENG: ಇಂಗ್ಲೆಂಡ್​ನ ಸೌತಾಂಪ್ಟನ್‌ನ ದಿ ರೋಸ್ ಬೌಲ್‌ನಲ್ಲಿ ಇಂದು(ಜು. 11) ನಡೆದ ಭಾರತ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ಸರಣಿಯನ್ನು ವಾಷ್​ಔಟ್ ಮಾಡಿ, ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 20 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ 257 ರನ್ ಗಳಿಸಿ ಭಾರತಕ್ಕೆ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು. ಇಂಗ್ಲೆಂಡ್ ಪರ ಜೋಸ್ ಬಟ್ಲರ್ 64 ಎಸೆತಗಳಲ್ಲಿ 12 ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳನ್ನು ಹೊಡೆದು 131 ರನ್ ಗಳಿಸಿದ್ರೆ, ಹ್ಯಾರಿ ಬ್ರೂಕ್ 45 ಎಸೆತಗಳಲ್ಲಿ 4 ಬೌಂಡರಿ 8 ಸಿಕ್ಸರ್​​​ಗಳನ್ನು ಹೊಡೆದು 95 ರನ್​ಗಳಿಗೆ ತಂಡ ಬೃಹತ್ ಮೊತ್ತ ಕಲೆಹಾಕಲು ಸಹಾಯ ಮಾಡಿದರು.
ಸೆಕೆಂಡ್ ಬ್ಯಾಟಿಂಗ್​ ಮೂಲಕ ಇಂಗ್ಲೆಂಡ್ ನೀಡಿದ 258 ಬೃಹತ್ ರನ್​ಗಳ ಗುರಿ ಬೆನ್ನತ್ತಿದ ಭಾರತ, ಆರಂಭಿಕವಾಗಿ ಉತ್ತಮ ಬ್ಯಾಟಿಂಗ್ ಮಾಡಿತು. ಭಾರತದ ಪರ ಇಶಾನ್ ಕಿಶನ್ (56) ಮತ್ತು ತಿಲಕ್ ವರ್ಮಾ (53) ಅವರ ಅರ್ಧಶತಕಗಳ ಹೊರತಾಗಿಯೂ ಭಾರತ 8 ವಿಕೆಟ್‌ಗೆ 201 ರನ್‌ಗಳಿಗೆ ಸೀಮಿತವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net