ಮೊದಲು ನಮ್ಮ ಅನ್ನದಾತ...ಆಮೇಲೆ ವ್ಯಾಪಾರ: ಅಮೆರಿಕ ಜೊತೆಗಿನ ಒಪ್ಪಂದದ ಒಳಸುಳಿವು ಬಿಚ್ಚಿಟ್ಟ ಕೇಂದ್ರ ಕೃಷಿ ಸಚಿವ! | Shivraj Singh Chouhan

Shivraj Singh Chouhan | ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್
Shivraj Singh Chouhan | ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್
Published on
ದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಭಾರತೀಯ ರೈತರ ಹಿತಾಸಕ್ತಿಗಳನ್ನು ಕಾಪಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಸಿಂಗ್​, ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ, ಅದರಲ್ಲೂ ಮುಖ್ಯ ಧಾನ್ಯಗಳು ಮತ್ತು ಪ್ರಮುಖ ಬೆಳೆಗಳು ಮಾತ್ರವಲ್ಲದೆ, ಡೈರಿ ಉತ್ಪನ್ನಗಳು ಸಹ ಸುರಕ್ಷಿತವಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಬಲವಾದ ಸಂವಾದದಲ್ಲಿ ನಂಬಿಕೆ ಇಡುತ್ತೇವೆ, ಸಂಘರ್ಷದಲ್ಲಿ ಅಲ್ಲ. ಈ ಒಪ್ಪಂದವು ನಿಜವಾಗಿಯೂ ರಾಜತಾಂತ್ರಿಕತೆ, ಅಭಿವೃದ್ಧಿ ಮತ್ತು ಘನತೆಗೆ ಒಂದು ವಿಶಿಷ್ಟ ಉದಾಹರಣೆಯಾಗಿದೆ ಎಂದರು.
ದೇಶದ ನಾಗರಿಕನಾಗಿ ನನಗೆ ಹೆಮ್ಮೆ ಇದ್ದು, ದೇಶವನ್ನು ತಲೆಬಾಗಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದು, ಎಷ್ಟೇ ವೈಯಕ್ತಿಕ ನಷ್ಟಗಳು ಸಂಭವಿಸಿದರೂ ರೈತರ ಹಿತಾಸಕ್ತಿಗಳ ಬಗ್ಗೆ ಯಾವುದೇ ರಾಜಿ ಇರುವುದಿಲ್ಲ ಎಂದು ಹೇಳಿರುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ.

ಕಾಂಗ್ರೆಸ್ ಸುಳ್ಳು ಹರಡುತ್ತಿದೆ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಕಾಂಗ್ರೆಸ್ ಸುಳ್ಳು ಮಾಹಿತಿ ಹರಡುತ್ತಿದೆ ಎಂದು ಚೌಹಾಣ್ ಆರೋಪಿಸಿದ್ದು, ಅನಿಶ್ಚಿತತೆ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸಲು ವದಂತಿಗಳನ್ನು ಹರಡಲಾಗಿದೆ ಎಂದು ಆರೋಪಿಸಿದರು.

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ

ಭಾರತ ಮತ್ತು ಅಮೆರಿಕ ಸೋಮವಾರ ಒಂದು ಮಹತ್ವದ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಿದ್ದು, ಒಂದು ವರ್ಷ ಪೂರ್ತಿ ನಡೆದ ಬಿಸಿ ಸುಂಕ ವಿವಾದವನ್ನು ಕೊನೆಗೊಳಿಸಿದೆ. ಸೋಮವಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ರಫ್ತುಗಳ ಮೇಲಿನ ಪರಸ್ಪರ ಸುಂಕಗಳನ್ನು ಹಿಂದಿನ 25% ರಿಂದ 18% ಕ್ಕೆ ಇಳಿಸುವುದಾಗಿ ಘೋಷಿಸಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net